ADVERTISEMENT

ಚೀನಾ, ರಷ್ಯಾದಿಂದ ಹೆಚ್ಚಿನ ಸವಾಲು ಅಮೆರಿಕದ ಮಾಜಿ ರಾಯಭಾರಿ ಅಭಿಮತ

ಪಿಟಿಐ
Published 12 ಜೂನ್ 2020, 9:14 IST
Last Updated 12 ಜೂನ್ 2020, 9:14 IST
ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌
ರಷ್ಯಾ ಅಧ್ಯಕ್ಷ ವ್ಲಾಡಿಮರ್‌ ಪುಟಿನ್‌ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌    

ನವದೆಹಲಿ: ಭಾರತ ಮತ್ತು ಅಮೆರಿಕ ಒಟ್ಟುಗೂಡಿ ಕಾರ್ಯನಿರ್ವಹಿಸಬಹುದು. ಇದು, ‘ಸರ್ವಾಧಿಕಾರಿ’ ಚೀನಾ ವಿರುದ್ಧ ಹೋರಾಟಕ್ಕಾಗಿ ಅಲ್ಲ, ಬದಲಾಗಿ ಈ ನೆಲದ ಕಾನೂನುಗಳ ರಕ್ಷಣೆಗಾಗಿ ಎಂದು ಅಮೆರಿಕದ ಮಾಜಿ ರಾಯಭಾರಿ, ಹಾರ್ವರ್ಡ್‌ ಪ್ರೊಫೆಸರ್ ನಿಕೊಲಾಸ್‌ ಬರ್ನ್ಸ್‌ ಹೇಳಿದ್ದಾರೆ.

ಇವರು ಶುಕ್ರವಾರ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಅವರ ಜೊತೆಗೆ ಸಂವಾದ ನಡೆಸುತ್ತಿದ್ದರು. ‘ನನ್ನ ಪ್ರಕಾರ, ಭಾರತ ಮತ್ತು ಅಮೆರಿಕವು‘ಸರ್ವಾಧಿಕಾರಿ’ ದೇಶಗಳಾದ ರಷ್ಯಾ, ಚೀನಾದಿಂದ ಸವಾಲು ಎದುರಿಸಬೇಕಾಗಬಹುದು’ ಎಂದು ಬರ್ನ್ಸ್‌ ಹೇಳಿದರು.

ಸಮಾಧಾನ, ಶಾಂತಿ ಈ ನೆಲದ ಗುಣವೇ ಆಗಿರುವ ಕಾರಣ ಭಾರತ ಮತ್ತು ಅಮೆರಿಕದ ಪಾಲುದಾರಿಕೆ ನಡೆಯುತ್ತಿದೆ. ಆದರೆ, ಈ ಮೊದಲು ನಮ್ಮ ಡಿಎನ್‌ಎಯಲ್ಲಿ ಇದ್ದ ತಾಳ್ಮೆಯ ಪ್ರಮಾಣವನ್ನು ಎರಡೂ ದೇಶಗಳಲ್ಲಿ ಈಗ ಕಾಣಲು ಸಾಧ್ಯವಿಲ್ಲವಾಗಿದೆ ಎಂದು ರಾಹುಲ್‌ ಗಾಂಧಿ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ADVERTISEMENT

‘ಹೊಸ ಚಿಂತನೆಗಳನ್ನು ನಾವು ಒಪ್ಪಿಕೊಳ್ಳಬೇಕು. ನಾವು ಮುಕ್ತವಾಗಿ ಇರಬೇಕು. ಆದರೆ, ಡಿಎನ್‌ಎಯಲ್ಲಿ ಇದ್ದ ತಾಳ್ಮೆಯ ಲಕ್ಷಣಗಳು ನಿಧಾನಕ್ಕೆ ಮರೆಯಾಗುತ್ತಿವೆ. ಇಂಥ ತಾಳ್ಮೆಯ ಗುಣ ನನಗೆ ಅಮೆರಿಕದಲ್ಲಿ ಅಥವಾ ಅಥವಾ ಭಾರತದಲ್ಲಿ ಕಾಣುತ್ತಿಲ್ಲ. ಇದು, ಬೇಸರದ ಸಂಗತಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾರ್ಜ್‌ ಫ್ಲಾಯ್ಡ್ ಸಾವಿನ ನಂತರ ಅಮೆರಿಕದಲ್ಲಿ ವ್ಯಾಪಕವಾಗಿ ಕಂಡುಬಂದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರು ಈ ಮಾತು ಹೇಳಿದರು.

ಈ ಮೊದಲು ಶಿಕ್ಷಣ, ರಕ್ಷಣೆ, ಆರೋಗ್ಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಿಗೆ ಅನ್ವಯಿಸಿ ಇದ್ದ ಬಾಂಧವ್ಯ ಈಗ ಕೇವಲ ರಕ್ಷಣಾಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.