ADVERTISEMENT

ಜನಸಂಖ್ಯೆ ಬೆಳವಣಿಗೆಗೆ ಶೀಘ್ರ ನೀತಿ: ಸಿ.ಎಂ ಚಂದ್ರಬಾಬು ನಾಯ್ಡು

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 15:54 IST
Last Updated 12 ಜುಲೈ 2025, 15:54 IST
<div class="paragraphs"><p>ಚಂದ್ರಬಾಬು ನಾಯ್ಡು</p></div>

ಚಂದ್ರಬಾಬು ನಾಯ್ಡು

   

ಹೈದರಾಬಾದ್‌: ಜನಸಂಖ್ಯೆಯು ದೇಶದ ಪ್ರಬಲ ಆರ್ಥಿಕ ಆಸ್ತಿಯಾಗಿದೆ. ಜನಸಂಖ್ಯೆ ಬೆಳವಣಿಗೆಗೆ ರಾಜ್ಯದಲ್ಲಿ ಶೀಘ್ರದಲ್ಲಿ ನೂತನ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಹೇಳಿದರು. 

ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ಅಮರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು. ಜನಸಂಖ್ಯೆ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಜನಸಂಖ್ಯೆ ಹೆಚ್ಚಳಕ್ಕೆ ಶಿಘ್ರವೇ ನೂತನ ನೀತಿ ಜಾರಿಗೊಳಿಸಲಾಗುವುದು ಎಂದರು. 

ADVERTISEMENT

‘ಜನಸಂಖ್ಯೆ ನಿರ್ವಹಣೆ ಪ್ರತಿ ಕುಟುಂಬದಿಂದ ಪ್ರಾರಂಭವಾಗುತ್ತದೆ. ನಿಮ್ಮ ಅಭಿಪ್ರಾಯವನ್ನು ನಮ್ಮ ನೂತನ ಯೋಜನೆಗೆ ಮಾರ್ಗದರ್ಶನವಾಗಿ ಸ್ವೀಕರಿಸುತ್ತೇವೆ’ ಎಂದು ಹೇಳಿದರು. ‌

‘ಅವಿಭಜಿತ ಆಂಧ್ರದಲ್ಲಿ ಹಿಂದಿನ ಸರ್ಕಾರವು  ಜನಸಂಖ್ಯೆ ನಿಯಂತ್ರಣಕ್ಕೆ ನೀತಿಯನ್ನು ರೂಪಿಸಿತ್ತು. ಆದರೆ ಇದೀಗ ಜನಸಂಖ್ಯೆ ನಿರ್ವಹಣೆ ಇಂದಿನ ಅಗತ್ಯವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲು ಭಾರತಕ್ಕೆ ತನ್ನ ಜನಸಂಖ್ಯೆಯೇ ಸಾಮರ್ಥ್ಯವಾಗಿದೆ. 

‘ಒಂದು ಕಾಲದಲ್ಲಿ ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯೇ ಸಮಸ್ಯೆಯಾಗಿತ್ತು. 2004ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಕುಟುಂಬ ಯೋಜನೆಯನ್ನು ಜಾರಿಗೊಳಿಸಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರನ್ನು ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿದಂತೆ ಹೊಸ ನಿಯಮವನ್ನೂ ತಂದೆವು. ಆದರೀಗ ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದವರು ಮಾತ್ರವೇ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಬೇಕೆಂಬ ನಿಯಮ ಜಾರಿ ತರುವ ಅಗತ್ಯವಿದೆ. ಒಂದು ದೇಶವೆಂದರೆ ಕೇವಲ ಭೂ ಪ್ರದೇಶ, ಗಡಿ, ನಗರಗಳು ಮಾತ್ರವಲ್ಲ; ದೇಶವೆಂದರೆ ಅದರ ಜನ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.