ADVERTISEMENT

CWC: ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

ಪಿಟಿಐ
Published 30 ನವೆಂಬರ್ 2022, 10:24 IST
Last Updated 30 ನವೆಂಬರ್ 2022, 10:24 IST
ಚಂದ್ರಶೇಖರ್ ಅಯ್ಯರ್
ಚಂದ್ರಶೇಖರ್ ಅಯ್ಯರ್   

ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’ (CWC) ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ.

ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಚಂದ್ರಶೇಖರ್ ಅವರು 1984ನೇ ಬ್ಯಾಚ್‌ನ ‘ಸೆಂಟ್ರಲ್ ವಾಟರ್ ಎಂಜಿನಿಯರಿಂಗ್ ಸರ್ವಿಸ್‌’ನ ಅಧಿಕಾರಿಯಾಗಿದ್ದಾರೆ.

ADVERTISEMENT

ಕೇಂದ್ರದ ಜಲಯೋಜನಗೆಳ ಅನುಷ್ಠಾನ, ಪ್ರಗತಿಯಲ್ಲಿ ಚಂದ್ರಶೇಖರ್ ಅಯ್ಯರ್ ಅವರು ಸುಮಾರು 36 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದಾರೆ. ಅಲ್ಲದೇ ನೆರೆಯ ದೇಶಗಳ ಜಲ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ಚಂದ್ರಶೇಖರ್ ಅವರು ಜಲ ಆಯೋಗದ ಅಧ್ಯಕ್ಷ ಹುದ್ದೆಯ ಜೊತೆ ‘ಅಣೆಕಟ್ಟುಗಳ ರಕ್ಷಣೆ ರಾಷ್ಟ್ರೀಯ ಪ್ರಾಧಿಕಾರ’ದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.