ADVERTISEMENT

ಫೆಬ್ರುವರಿಯಲ್ಲಿ ಚಂದ್ರಯಾನ–2?

ಪಿಟಿಐ
Published 3 ಜನವರಿ 2019, 14:51 IST
Last Updated 3 ಜನವರಿ 2019, 14:51 IST
   

ಹೈದರಾಬಾದ್:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ‘ಚಂದ್ರಯಾನ–2’ನ್ನು ಫೆಬ್ರುವರಿಯಲ್ಲಿ ಉಡಾವಣೆ ಮಾಡಲಿದೆ ಎಂದು ಮೂಲಗಳು ಹೇಳಿವೆ.

‘ಫೆಬ್ರುವರಿಯಲ್ಲೇ ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆಸಿದ್ದೇವೆ. ದಿನಾಂಕ ನಿಗದಿಯಾಗಿಲ್ಲ. ತಿಂಗಳ ಮಧ್ಯಭಾಗದಲ್ಲಿ ಉಡಾವಣೆ ಆಗಬಹುದು’ ಎಂದು ಮೂಲಗಳು ಹೇಳಿವೆ.

ಭಾರತವು ಚಂದ್ರನ ಅಧ್ಯಯನಕ್ಕೆ ಕೈಗೊಂಡಿರುವ ಎರಡನೇ ಯೋಜನೆ ಇದಾಗಿದೆ. ಚಂದ್ರಯಾನ–2ರಲ್ಲಿ ಪರಿಭ್ರಮಣ ನೌಕೆ, ಚಂದ್ರನ ಮೇಲೆ ಇಳಿಯಲಿರುವ ವಾಹನ (ಲ್ಯಾಂಡರ್) ಮತ್ತು ಚಂದ್ರನ ಮೇಲ್ಮೈನಲ್ಲಿ ಓಡಾಡಲಿರುವ ವಾಹನವನ್ನು (ರೋವರ್) ಒಳಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.