ADVERTISEMENT

ತಿರುಪತಿ ದೇವಸ್ಥಾನಕ್ಕೆ ₹6 ಕೋಟಿ ದೇಣಿಗೆ ನೀಡಿದ ಚೆನ್ನೈ ಮೂಲದ ಭಕ್ತ

ಪಿಟಿಐ
Published 20 ಜನವರಿ 2025, 5:54 IST
Last Updated 20 ಜನವರಿ 2025, 5:54 IST
ತಿರುಮಲ ತಿರುಪತಿ ದೇವಸ್ಥಾನ
ತಿರುಮಲ ತಿರುಪತಿ ದೇವಸ್ಥಾನ   

ತಿರುಪತಿ: ಚೆನ್ನೈ ಮೂಲದ ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನಕ್ಕೆ ₹6 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಧಮಾನ್ ಜೈನ್ ಎಂಬುವವರು ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್‌ವಿಬಿಸಿ)ಗೆ ₹5 ಕೋಟಿ ಹಾಗೂ ಶ್ರೀ ವೆಂಕಟೇಶ್ವರ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ತಿರುಮಲ ದೇಗುಲದ ರಂಗನಾಯಕ ಮಂಟಪದಲ್ಲಿ ಎಸ್‌ವಿಬಿಸಿಗೆ ₹5 ಕೋಟಿ ಹಾಗೂ ಎಸ್‌ವಿ ಗೋಸಂರಕ್ಷಣಾ ಟ್ರಸ್ಟ್‌ಗೆ ₹1 ಕೋಟಿಯನ್ನು ಡಿಡಿ ಮೂಲಕ ಟಿಟಿಡಿಗೆ ಹಸ್ತಾಂತರಿಸಿದರು ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ವರ್ಧಮಾನ್ ಅವರು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಡಿಡಿಗಳನ್ನು ಹಸ್ತಾಂತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.