ADVERTISEMENT

ನೋಡಿ: ಚಾಟಿ ಏಟಿಗೆ ಕೈಯೊಡ್ಡಿದ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌

ಪಿಟಿಐ
Published 5 ನವೆಂಬರ್ 2021, 9:47 IST
Last Updated 5 ನವೆಂಬರ್ 2021, 9:47 IST
ಚಾಟಿ ಏಟಿಗೆ ಕೈಯೊಡ್ಡಿದ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌
ಚಾಟಿ ಏಟಿಗೆ ಕೈಯೊಡ್ಡಿದ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌   

ರಾಯ್ಪುರ: ಗೋವರ್ಧನ ಪೂಜೆಯ ಆಚರಣೆಯ ಪ್ರಯುಕ್ತ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ಶುಕ್ರವಾರ ಚಾಟಿ ಏಟಿಗೆ ಕೈಯೊಡ್ಡಿದರು.

ದುರ್ಗಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸಾಂಪ್ರದಾಯಿಕ ಆಚರಣೆಯಲ್ಲಿ ರಾಜ್ಯದ ಒಳಿತಿಗೆ ಪ್ರಾರ್ಥಿಸಿ ಮುಖ್ಯಮಂತ್ರಿ ಬಘೇಲ್‌ ಅವರು ಚಾಟಿ ಏಟು ತಿಂದರು. ಹುಲ್ಲು ಮತ್ತು ಕುಷ್‌ (ಗಾಂಜಾ ಸೊಪ್ಪಿನಂತೆ ಬಳಕೆ ಮಾಡುವ ಗಿಡ) ಸಿದ್ಧಪಡಿಸಲಾಗಿದ್ದ ಚಾಟಿಯಿಂದ ಬಲಗೈನ ಮಣಿಕಟ್ಟಿಗೆ ಏಟು ಸ್ವೀಕರಿಸಿದರು. ಬಳಿಕ 8 ಸುತ್ತಿನ ಚಾಟಿ ಏಟು ನೀಡಿದ ವ್ಯಕ್ತಿ ಸಿಎಂ ಅವರನ್ನು ಅಪ್ಪಿಕೊಂಡರು.

ಈ ಆಚರಣೆಯಿಂದ ಸಮಸ್ಯೆಗಳಿಂದ ಹೊರಬರುವುದು ಹಾಗೂ ಶುಭವನ್ನು ಪಡೆಯುವುದು ಸಾಧ್ಯ ಎಂದು ನಂಬಲಾಗಿದೆ. ದೀಪಾವಳಿಯ ನಂತರದ ದಿನದಲ್ಲಿ ಗೋವರ್ಧನ ಪೂಜೆ ನೆರವೇರಿಸಲಾಗುತ್ತದೆ.

ADVERTISEMENT

'ಪ್ರತಿ ವರ್ಷದಂತೆ ಈ ಬಾರಿಯೂ ಮುಖ್ಯಮಂತ್ರಿ ಬಘೇಲ್‌ ಅವರು ಗೋವರ್ಧನ ಪೂಜೆಯಲ್ಲಿ ಭಾಗಿಯಾಗಿ ಚಾಟಿ ಏಟಿನ ನೋವು ಸಹಿಸಿಕೊಂಡರು. ಜನರ ಒಳತಿಗಾಗಿ ರಾಜ್ಯದಲ್ಲಿ ಹಲವು ವರ್ಷಗಳಿಂದ ಆಚರಿಸಲಾಗುತ್ತಿರುವ ಆಚರಣೆಯನ್ನು ಈ ಮೂಲಕ ಎತ್ತಿ ಹಿಡಿದಿದ್ದಾರೆ' ಎಂದು ಸರ್ಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ಗೋವರ್ಧನ ಪೂಜೆ ಸಂದರ್ಭದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಬಘೇಲ್‌ ಅವರು ಚಾಟಿ ಏಟು ಅನುಭವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.