ADVERTISEMENT

ಛತ್ತೀಸಗಢ: ಉಪಮುಖ್ಯಮಂತ್ರಿ ಅರುಣ್ ಸಾವೋ ಸೋದರಳಿಯ ಜಲಾಶಯದಲ್ಲಿ ಮುಳುಗಿ ಸಾವು

ಪಿಟಿಐ
Published 5 ಆಗಸ್ಟ್ 2024, 14:26 IST
Last Updated 5 ಆಗಸ್ಟ್ 2024, 14:26 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಕವರ್ಧಾ: ಛತ್ತೀಸಗಢದ ಉಪಮುಖ್ಯಮಂತ್ರಿ ಅರುಣ್ ಸಾವೋ ಅವರ ಸೋದರಳಿಯ, ರಾಣಿ ದಹರಾ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಬಿಜೆಪಿ ಯುವ ಘಟಕದ ಪದಾಧಿಕಾರಿ ತುಷಾರ್ ಸಾಹು (21)  ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ತನ್ನ ಐವರು ಸ್ನೇಹಿತರೊಂದಿಗೆ ಕಬೀರಧಾಮ ಜಿಲ್ಲೆಯ ರಾಣಿ ದಹರಾ ಜಲಾಶಯಕ್ಕೆ ತೆರಳಿದ್ದರು. ಅಲ್ಲಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ಕಬೀರಧಾಮ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಸಾಹು ಅವರ ಪತ್ತೆಗಾಗಿ ಪೊಲೀಸರು ಭಾನುವಾರ ತಡರಾತ್ರಿಯವರೆಗೆ ಕಾರ್ಯಚರಣೆ ನಡೆಸಿದ್ದು, ಸೋಮವಾರ ಬೆಳ್ಳಿಗೆ 6.30ರ ಸುಮಾರಿಗೆ ಬಂಡೆಯಾಡಿ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲಾಗಿದೆ’ ಎಂದು ಅವರು ಹೇಳಿದ್ದಾರೆ.

ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.