ADVERTISEMENT

ಛತ್ತೀಸ್‌ಗಡ: ಸೊಸೆಗೆ ಮರು ಮದುವೆ ಮಾಡಿಸಿದ ಮಾಜಿ ಸಂಸದ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 12:07 IST
Last Updated 7 ನವೆಂಬರ್ 2022, 12:07 IST

ಧಮ್ತಾರಿ (ಛತ್ತೀಸ್‌ಗಡ): ಬಿಜೆಪಿಯ ಮಾಜಿ ಸಂಸದಚಂದುಲಾಲ್ ಸಾಹು ಅವರು ತಮ್ಮ ವಿಧವೆಸೊಸೆಗೆ ಮರು ಮದುವೆ ಮಾಡಿಸಿದ್ದಾರೆ.

ಚಂದುಲಾಲ್ ಸಾಹು ಅವರ ಪುತ್ರ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಅವರು ಪತ್ನಿ ಕಲ್ಯಾಣಿ ಹಾಗೂ ಒಂದೂವರೆ ವರ್ಷದ ಮಗುವನ್ನು ಅಗಲಿದ್ದರು.

ಸೊಸೆ ಮತ್ತು ಮೊಮ್ಮಗನ ಭವಿಷ್ಯದದೃಷ್ಟಿಯಿಂದ ತಾವೇ ಮುಂದೆ ನಿಂತು ಮದುವೆ ಮಾಡಿಸಿರುವುದಾಗಿ ಸಾಹು ಹೇಳಿದ್ದಾರೆ.

ADVERTISEMENT

ಡಾ. ವೀರೇಂದ್ರ ಗಂಜೀರ್ ಕೂಡ ಪತ್ನಿಯನ್ನು ಕಳೆದುಕೊಂಡಿದ್ದರು. ಅವರಿಗೆ ಸಾಹು ಅವರು ಸೊಸೆಯನ್ನು ಕೊಟ್ಟು ಮದುವೆ ಮಾಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.