ADVERTISEMENT

ಛತ್ತೀಸ‌ಗಡ| ಗೋಧನ್‌ ನ್ಯಾಯ ಯೋಜನೆಗೆ ಚಾಲನೆ, ಪ್ರತಿ ಕೆ.ಜಿ ₹2ರಂತೆ ಸೆಗಣಿ ಖರೀದಿ

ಪಿಟಿಐ
Published 20 ಜುಲೈ 2020, 14:53 IST
Last Updated 20 ಜುಲೈ 2020, 14:53 IST
‘ಗೋಧನ್‌ ನ್ಯಾಯ’ ಯೋಜನೆಗೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಚಾಲನೆ ನೀಡಿದರು
‘ಗೋಧನ್‌ ನ್ಯಾಯ’ ಯೋಜನೆಗೆ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಚಾಲನೆ ನೀಡಿದರು   

ರಾಯಪುರ: ಸಾವಯವ ಗೊಬ್ಬರ ತಯಾರಿಸಲು ಪ್ರತಿ ಕೆ.ಜಿಗೆ ₹2ರಂತೆ ಸೆಗಣಿ ಖರೀದಿಸುವ ‘ಗೋಧನ್‌ ನ್ಯಾಯ’ ಯೋಜನೆಗೆ ಛತ್ತೀಸ‌ಗಡ ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಸೋಮವಾರ ಚಾಲನೆ ನೀಡಿದರು.

ದೇಶದಲ್ಲೇ ಇಂಥ ಯೋಜನೆ ಪ್ರಾರಂಭಿಸಿದ ಹೆಗ್ಗಳಿಕೆ ಛತ್ತೀಸ್‌ಗಡದ್ದಾಗಿದ್ದು, ಸ್ಥಳೀಯ ಹಬ್ಬವಾದ ಹರೇಲಿ ಸಂದರ್ಭದಲ್ಲಿ ಇದನ್ನು ಪ್ರಾರಂಭಿಸಲಾಗಿದೆ. ಈ ಮೂಲಕ ದನ ಸಾಕಣೆ, ದನಗಳ ರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಸರ್ಕಾರ ಮುಂದಾಗಿದೆ. ‘ಈ ಯೋಜನೆ ರೈತರಿಗೆ ಹಾಗೂ ದನ ಸಾಕಣೆಗಾರರಿಗೆ ವರವಾಗಲಿದ್ದು, ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಮೀಣ ಭಾಗಕ್ಕೆ ನೆರವಾಗಲಿದೆ’ ಎಂದು ಬಘೇಲ್‌ ಹೇಳಿದರು.

‘ಈ ಯೋಜನೆಯಿಂದ ರೈತರಿಗೆ ಹೆಚ್ಚುವರಿಸಂಪಾದನೆಯಾಗಲಿದ್ದು, ಸಾವಯವ ಗೊಬ್ಬರ ಬಳಕೆಗೂ ಪ್ರೋತ್ಸಾಹ ಸಿಗಲಿದೆ. ಮಹಿಳಾ ಸ್ವಾವಲಂಬಿ ಸಂಘಟನೆಗಳು ಇದನ್ನು ಬಳಸಿಕೊಂಡು ಎರೆಹುಳು ಗೊಬ್ಬರ ತಯಾರಿಸಲಿದ್ದಾರೆ. ಇವುಗಳನ್ನು ಪ್ರತಿ ಕೆ.ಜಿಗೆ ₹8ರಂತೆ ರೈತರಿಗೆ ಮಾರಾಟ ಮಾಡಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.