ADVERTISEMENT

ಪ್ರೇಯಸಿಯ ಗಂಡನನ್ನು ಕೊಲ್ಲಲು ಪಾರ್ಸೆಲ್‌ನಲ್ಲಿ ‘ಬಾಂಬ್‌’ ಕಳಿಸಿದ ಪ್ರಿಯತಮ

ಪಿಟಿಐ
Published 17 ಆಗಸ್ಟ್ 2025, 6:56 IST
Last Updated 17 ಆಗಸ್ಟ್ 2025, 6:56 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಖೈರಗಢ(ಛತ್ತೀಸಗಢ): ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದ ಯುವತಿಯು ಬೇರೊಬ್ಬನ ಜೊತೆಗೆ ಮದುವೆಯಾದ ಕಾರಣ, ಆಕೆಯ ಗಂಡನನ್ನು ಕೊಲ್ಲಲು ಪ್ರಿಯತಮನು ‘ಬಾಂಬ್‌ ಗಿಫ್ಟ್‌’ ಪಾರ್ಸೆಲ್ ಮಾಡಿರುವ ಘಟನೆ ಛತ್ತೀಸಗಢದಲ್ಲಿ ನಡೆದಿದೆ.

ಎಲೆಕ್ಟ್ರಿಷಿಯನ್ ಆಗಿರುವ ವಿನಯ್‌ ವರ್ಮಾ(20), ತನ್ನ ಪ್ರೇಯಸಿಯ ಗಂಡನಿಗೆ ಮ್ಯೂಸಿಕ್‌ ಸ್ಪೀಕರ್‌ ಅನ್ನು ಉಡುಗೊರೆ ರೂಪದಲ್ಲಿ ಪಾರ್ಸೆಲ್‌ ಮಾಡಿದ್ದಾನೆ. ಯುಟ್ಯೂಬ್‌ ನೋಡಿಕೊಂಡು ಅದರೊಳಗೆ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಅಳವಡಿಸಿದ್ದಾನೆ. ಜಿಲೇಟಿನ್‌ ಕಡ್ಡಿಗಳನ್ನು ಐಇಡಿಗೆ ಸಂಪರ್ಕಿಸಿದ್ದು, ಅದಕ್ಕೆ ವಿದ್ಯುತ್‌ ತಗುಲಿದ ತಕ್ಷಣವೇ ಬಾಂಬ್‌ ಸ್ಪೋಟಗೊಳ್ಳುವಂತೆ ತಯಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಕಲಿ ಅಂಚೆಯ ಮೂಲಕ ತಲುಪಿದ ಉಡುಗೊರೆಯು ಅನುಮಾನಕ್ಕೆ ಕಾರಣವಾಗಿದ್ದರಿಂದ ಪ್ರೇಯಸಿಯ ಗಂಡ ಅಫ್ಸರ್ ಖಾನ್ ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬಾಂಬ್‌ ನಿಷ್ಕ್ರೀಯ ದಳವು ಉಡುಗೊರೆಯನ್ನು ಪರಿಶೀಲಿಸಿದಾಗ ಸ್ಪೀಕರ್‌ನೊಳಗೆ ಎರಡು ಕಿ.ಲೋ ಐಇಡಿ ಇರುವುದು ಪತ್ತೆಯಾಗಿದೆ.

ತನ್ನ ಪ್ರೇಯಸಿಯ ಗಂಡ ಅಫ್ಸರ್ ಖಾನ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ವಿನಯ್‌ ವರ್ಮಾ ಕೃತ್ಯ ಎಸೆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅವನು ಗೂಗಲ್‌ನಲ್ಲಿ ‘ಪೊಲೀಸರ ಕೈಗೆ ಸಿಕ್ಕಿ ಬೀಳದಂತೆ ಬಾಂಬ್‌ ಉಪಯೋಗಿಸಿ ವ್ಯಕ್ತಿಯನ್ನು ಕೊಲೆ ಮಾಡುವುದು ಹೇಗೆ’ ಎಂದು ಸರ್ಚ್‌ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ ಇನ್ನೂ ಆರು ಜನರನ್ನು ಬಂಧಿಸಲಾಗಿದೆ.

2023ರ ಏಪ್ರೀಲ್‌ನಲ್ಲೂ ಛತ್ತೀಸಗಢದಲ್ಲಿ ಇದೇ ರೀತಿಯ ಘಟನೆ ಜರುಗಿತ್ತು. ದುರಂತದಲ್ಲಿ ಪ್ರೇಯಸಿಯ ಪತಿ ಹಾಗೂ ಅವನ ಸಹೋದರ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.