ADVERTISEMENT

ಛತ್ತೀಸಗಢ | ಎಸ್‌ಯುವಿ-ಟ್ರಕ್ ಡಿಕ್ಕಿ: ಐವರು ಸಾವು, 3 ಮಂದಿಗೆ ಗಾಯ

ಪಿಟಿಐ
Published 26 ನವೆಂಬರ್ 2025, 4:05 IST
Last Updated 26 ನವೆಂಬರ್ 2025, 4:05 IST
   

ಜಂಜ್‌ಗೀರ್ (ಛತ್ತೀಸಗಢ): ಎಸ್‌ಯುವಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು, ಇತರ ಮೂವರು ಗಾಯಗೊಂಡಿದ್ದಾರೆ. ಛತ್ತೀಸಗಢ ಜಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೃತರನ್ನು ವಿಶ್ವನಾಥ್ ದೇವಾಂಗನ್ (43), ರಾಜೇಂದ್ರ ಕಶ್ಯಪ್ (27), ಪೊಮೇಶ್ವರ್ ಜಲತಾರೆ (33), ಭೂಪೇಂದ್ರ ಸಾಹು (40) ಮತ್ತು ಕಮಲನಯನ್ ಸಾಹು (22) ಎಂದು ಗುರುತಿಸಲಾಗಿದೆ.

ಮಂಗಳವಾರ ತಡರಾತ್ರಿ ಜಂಜ್‌ಗೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಕ್ಲಿ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಮೃತರೆಲ್ಲರೂ ನವಗಢದ ನಿವಾಸಿಗಳು. ಇವರು ಮದುವೆ ಸಮಾರಂಭವೊಂದಲ್ಲಿ ಭಾಗವಹಿಸಿ ವಾಪಸ್‌ ಆಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಡಿಕ್ಕಿಯ ರಭಸಕ್ಕೆ ಎಸ್‌ಯುವಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅದರಲ್ಲಿದ್ದ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.