ADVERTISEMENT

Chhattisgarh Assembly Election Results: ಯಾರು ಏನಂದ್ರು?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 15:03 IST
Last Updated 3 ಡಿಸೆಂಬರ್ 2023, 15:03 IST
ರಮಣ್ ಸಿಂಗ್‌
ರಮಣ್ ಸಿಂಗ್‌   

ಕಾಂಗ್ರೆಸ್ ಗ್ಯಾರಂಟಿ ಮತ್ತು ಭೂಪೇಶ್ ಬಘೆಲ್‌ ಅವರ ಭರವಸೆಗಳ ಮೇಲೆ ವಿಶ್ವಾಸ ಇರಿಸದೇ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳ ಮೇಲೆ ಭರವಸೆ ಇರಿಸಿರುವುದನ್ನು ಈ ಫಲಿತಾಂಶ ಬಿಂಬಿಸುತ್ತದೆ. ನಾನು ಹೈಕಮಾಂಡ್‌ನಿಂದ ಈವರೆಗೆ ಏನನ್ನೂ ಕೇಳಿಲ್ಲ. ಹೈಕಮಾಂಡ್‌ ಯಾವ ಜವಾಬ್ದಾರಿಯನ್ನು ನೀಡುತ್ತದೋ ಅದನ್ನು ನಿಭಾಯಿಸುತ್ತೇನೆ

ರಮಣ್‌ ಸಿಂಗ್‌, ಬಿಜೆಪಿ ಹಿರಿಯ ನಾಯಕ 

ಕಾಂಗ್ರೆಸ್‌ನಲ್ಲಿರುವ ಒಳಜಗಳ, ಅಧಿಕಾರದ ದಾಹ ಮತ್ತು ಕೆಲ ನಾಯಕರು ಬಿಜೆಪಿಯ ಗುಪ್ತ ಏಜೆಂಟರಾಗಿ ಕೆಲಸ ಮಾಡುತ್ತಿರುವುದೇ ಛತ್ತೀಸಗಢ ಮತ್ತು ಇತರೆಡೆ ಕಾಂಗ್ರೆಸ್‌ ಸೋಲಲು ಕಾರಣ.

ADVERTISEMENT

ಮಿತ್ರಪಕ್ಷಗಳ ಜೊತೆ ಒಗ್ಗೂಡಿ ಹೋರಾಡುವ ಅಗತ್ಯ ಕಾಂಗ್ರೆಸ್‌ಗಿತ್ತು. ಆದರೆ, ಈಗಾಗಲೇ ಗೆದ್ದಿದ್ದೇವೆ ಎಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿತು. ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಈ ತೀರ್ಮಾನವೇ ಕಾರಣ

-ಪಿಣರಾಯಿ ವಿಜಯನ್‌, ಕೇರಳ ಮುಖ್ಯಮಂತ್ರಿ

20 ವರ್ಷಗಳ ಹಿಂದೆಯೂ ಕಾಂಗ್ರೆಸ್‌ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸಿತ್ತು.  ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ, ಚುನಾವಣೆಯಲ್ಲಿ ಸೋತು, ದೆಹಲಿಯಲ್ಲಿ ಮಾತ್ರ ಗೆದ್ದಿತ್ತು. ಅದಾಗಿ ಕೆಲವೇ ತಿಂಗಳ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೇರಿತು. ಹೀಗಾಗಿ ಈ ಫಲಿತಾಂಶದಿಂದ ಕಾಂಗ್ರೆಸ್‌ ಎದೆಗುಂದಬೇಕಿಲ್ಲ

-ಜೈರಾಮ್ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ)

ಪಿಣರಾಯಿ ವಿಜಯನ್‌
ಜೈರಾಮ್‌ ರಮೇಶ್‌
ರಮಣ್‌ ಸಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.