ADVERTISEMENT

ಪಾಕ್‌ನ 18 ಮಂದಿಯನ್ನು 'ಯುಎಪಿಎ' ಅಡಿ ಭಯೋತ್ಪಾದಕರೆಂದು ಘೋಷಿಸಿದ ಗೃಹ ಸಚಿವಾಲಯ

ಏಜೆನ್ಸೀಸ್
Published 27 ಅಕ್ಟೋಬರ್ 2020, 8:39 IST
Last Updated 27 ಅಕ್ಟೋಬರ್ 2020, 8:39 IST
ಪ್ರಾತನಿಧಿಕ ಚಿತ್ರ
ಪ್ರಾತನಿಧಿಕ ಚಿತ್ರ   

ನವದೆಹಲಿ: ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಮತ್ತು ಭಯೋತ್ಪಾದನೆ ನಿಗ್ರಹ ನೀತಿಯನ್ನು ಬಲಪಡಿಸಲು 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿ ಪಾಕಿಸ್ತಾನದ 18 ಜನರನ್ನು ಭಯೋತ್ಪಾದಕರೆಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಿದೆ.

26/11ರ ಮುಂಬೈ ದಾಳಿಕೋರರಲ್ಲಿ ಒಬ್ಬನಾದ ಸಾಜಿದ್ ಮಿರ್ ಸೇರಿದಂತೆ 18 ಜನರನ್ನು ಘೋಷಿತ ಭಯೋತ್ಪದಕರ ಪಟ್ಟಿಗೆ ಸೇರಿಸಲಾಗಿದೆ. ಈತನನ್ನು ಪಾಕಿಸ್ತಾನ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ಮತ್ತು 26/11ರ ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಯೋಜಕರಲ್ಲಿ ಒಬ್ಬ ಎನ್ನಲಾಗಿದೆ.

ಇನ್ನುಳಿದಂತೆ ದಾವೂದ್ ಇಬ್ರಾಹಿಂ ಅವರ ಬಲಗೈ ಬಂಟ ಛೋಟಾ ಶಕೀಲ್ ಮತ್ತು ಇಂಡಿಯನ್ ಮುಜಾಹಿದ್ದೀನ್‌ನ ಭಟ್ಕಲ್ ಸಹೋದರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ADVERTISEMENT

ಯೂಸುಫ್ ಮುಜಾಮಿಲ್ ಅಲಿಯಾಸ್ ಅಹ್ಮದ್ ಬಾಯಿ, ಹಫೀಸ್ ಸಯೀದ್‌ನ ಸೋದರ ಮಾವ ಅಬ್ದುರ್ ರೆಹಮಾನ್ ಮಕ್ಕಿ, ಶಾಹಿದ್ ಮೆಹಮೂದ್, ಫರ್ಹಾತುಲ್ಲಾ ಘೋರಿ, ಅಬ್ದುಲ್ ರೌಫ್ ಅಸ್ಘರ್, ಯೂಸುಫ್ ಅಜರ್, ಶಾಹಿದ್ ಲತೀಫ್, ಸೈಯದ್ ಮೊಹಮ್ಮದ್ ಯೂಸುಫ್ ಶಾ, ಗುಲಾಂ ನಬಿ ಖಾನ್, ಜಾಫರ್ ಹುಸೇನ್ ಭಟ್, ರಿಯಾಜ್ ಇಸ್ಮಾಯಿಲ್ ಶಹಬಂದ್ರಿ, ಇಕ್ಬಾಲ್, ಮೊಹಮ್ಮದ್ ಅನಿಸ್ ಶೇಖ್, ಶೇಖ್ ಶಕೀಲ್ ಅಲಿಯಾಸ್ ಛೋಟಾ ಶಕೀಲ್, ಇಬ್ರಾಹಿಂ ಮೆಮನ್, ಜಾವೇದ್ ಚಿಕ್ನಾರನ್ನು 'ಘೋಷಿತ' ಭಯೋತ್ಪಾದಕರೆಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.