ADVERTISEMENT

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಯುವ ಸದಸ್ಯರ ಸಂಖ್ಯೆ ಹೆಚ್ಚಬೇಕು: ಪಿ.ಚಿದಂಬರಂ

ಪಿಟಿಐ
Published 20 ಫೆಬ್ರುವರಿ 2023, 13:03 IST
Last Updated 20 ಫೆಬ್ರುವರಿ 2023, 13:03 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯುಸಿ) ಯುವ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಬೇಕು’ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಸಿಡಬ್ಲ್ಯುಸಿಯಲ್ಲಿ ಸ್ಥಾನ ಗಳಿಸುವ ಕುರಿತು ನನಗೆ ವೈಯಕ್ತಿಯ ಮಹತ್ವಾಂಕ್ಷೆಗಳಿಲ್ಲ. ಆದರೆ, ಸಿಡಬ್ಲ್ಯುಸಿಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು ಹಾಗೂ ನೇಮಕವಾಗಬೇಕು’ ಎಂದರು.

‘ಎಐಸಿಸಿಯ ಸಂವಿಧಾನದ ಪ್ರಕಾರವಾಗಿ ಸಿಡಬ್ಲ್ಯುಸಿಗೆ ಅರ್ಧದಷ್ಟು ಜನರು ಆಯ್ಕೆಯಾಗಬೇಕು. ಯಾರೆಲ್ಲಾ ಸಿಡಬ್ಲ್ಯುಸಿ ಸದಸ್ಯರನ್ನು ಆಯ್ಕೆ ಮಾಡಬಹುದು ಎನ್ನುವ ಕುರಿತು ಗೊಂದಲಗಳಿವೆ. ಈ ಗೊಂದಲವನ್ನು ಪಕ್ಷದ ಚುನಾವಣಾ ಸಮಿತಿ ಪರಿಹರಿಸಬೇಕು. ಜೊತೆಗೆ ದೇಶದಲ್ಲಿರುವ ವೈವಿಧ್ಯತೆಯು ಪಕ್ಷದ ನಾನಾ ಸಮಿತಿಗಳಲ್ಲೂ ಕಾಣುವಂತಾಗಬೇಕು’ ಎಂದರು.

ADVERTISEMENT

‘2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಾವೆಲ್ಲ ಒಂದಾಗಬೇಕು ಎನ್ನುವ ಅರಿವು ಎಲ್ಲ ವಿರೋಧ ಪಕ್ಷಗಳಲ್ಲೂ ಮೂಡುತ್ತಿದೆ. ಆದರೂ, ಎಲ್ಲ ವಿರೋಧ ಪಕ್ಷಗಳು ಒಂದುಗೂಡಲು ಹಲವು ಸಮಸ್ಯೆಗಳಿವೆ. ಆದ್ದರಿಂದ ಪ್ರತೀ ಪಕ್ಷವು ತನ್ನ ರಾಜ್ಯ ಮಟ್ಟದ ದೃಷ್ಟಿಕೋನವನ್ನು ಕಳಚಿ, ರಾಷ್ಟ್ರಮಟ್ಟದ ದೃಷ್ಟಿಕೋನವನ್ನು ತನ್ನದಾಗಿಸಿಕೊಳ್ಳಬೇಕು. ಶರದ್‌ ಪವಾರ್‌, ನಿತೀಶ್‌ ಕುಮಾರ್‌, ಸೀತಾರಾಂ ಯೆಚೂರಿ ಹಾಗೂ ಸ್ಟಾಲಿನ್‌ ಅವರು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.