ADVERTISEMENT

ಅರುಣಾಚಲ ಪ್ರದೇಶ: ವಾಯುನೆಲೆಗಳಿಗೆ ರಾವತ್‌ ಭೇಟಿ

ಪಿಟಿಐ
Published 2 ಜನವರಿ 2021, 16:08 IST
Last Updated 2 ಜನವರಿ 2021, 16:08 IST
ಬಿಪಿನ್‌ ರಾವತ್‌
ಬಿಪಿನ್‌ ರಾವತ್‌   

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಭಾರತ– ಚೀನಾ ನಡುವಿನ ಗಡಿ ಬಿಕ್ಕಟ್ಟು ಮುಂದುವರಿದಿರುವ ಬೆನ್ನಲ್ಲೇ, ಅರುಣಾಚಲ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆಯ ಸಮೀಪವಿರುವ ಹಲವು ವಾಯುನೆಲೆಗಳಿಗೆ ಸೇನಾಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರು ಶನಿವಾರ ಭೇಟಿ ನೀಡಿ, ಸೇನಾ ಸನ್ನದ್ಧತೆಯ ಬಗ್ಗೆ ವಿಸ್ತೃತ ಪ್ರಗತಿಪರಿಶೀಲನೆ ನಡೆಸಿದ್ದಾರೆ.

ಅರುಣಾಚಲ ಪ್ರದೇಶದ ಲೋಹಿತ್‌ ವಲಯ ಹಾಗೂ ಡಿಬಾಂಗ್‌ ಕಣಿವೆಯಲ್ಲಿರುವ ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲ್ಪಟ್ಟಿರುವ ಸ್ಪೆಷಲ್‌ ಫ್ರಂಟಿಯರ್‌ ಫೋರ್ಸ್‌(ಎಸ್‌ಎಫ್‌ಎಫ್‌), ಸೇನೆ ಹಾಗೂ ಇಂಡೊ–ಟಿಬೆಟನ್‌ ಗಡಿ ಪೊಲೀಸ್‌(ಐಟಿಬಿಪಿ) ಸಿಬ್ಬಂದಿ ಜೊತೆ ರಾವತ್‌ ಅವರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಪರಿಣಾಮಕಾರಿ ಕಣ್ಗಾವಲು ಹಾಗೂ ಕಾರ್ಯಾಚರಣೆಗೆ ಸನ್ನದ್ಧರಾಗಿರುವುದಕ್ಕಾಗಿ ಸಿಬ್ಬಂದಿಯನ್ನು ರಾವತ್‌ ಶ್ಲಾಘಿಸಿದ್ದಾರೆ. ಭಾನುವಾರವೂ, ಹಲವು ಪ್ರಮುಖ ಸೇನಾ ನೆಲೆಗಳಿಗೆ ರಾವತ್‌ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.