ADVERTISEMENT

ಹವಾಮಾನ ಬದಲಾವಣೆ: ಗೌರವ ತಿರಸ್ಕರಿಸಿದ ಕಂಗುಜಮ್

ಪಿಟಿಐ
Published 7 ಮಾರ್ಚ್ 2020, 22:20 IST
Last Updated 7 ಮಾರ್ಚ್ 2020, 22:20 IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಆರಂಭಿಸಿರುವ (#SheInspiresUs) ಆಂದೋಲನದ ಅಂಗವಾಗಿ ನೀಡಲಾದ ಗೌರವವನ್ನು, ಹವಾಮಾನ ಬದಲಾವಣೆ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್‌ ತಿರಸ್ಕರಿಸಿದ್ದಾರೆ.

8 ವರ್ಷದ ಕಂಗುಜಮ್‌ ಅವರನ್ನು ಭಾರತದ ಗ್ರೇಟಾ ಎಂದೇ ಕರೆಯಲಾಗುತ್ತದೆ. ಆಕೆ ಕೈಗೊಂಡ ಹೋರಾಟವನ್ನು ಟ್ವೀಟರ್‌ನಲ್ಲಿ ಪ್ರಚುರಪಡಿಸಿತ್ತು.

ಇದಕ್ಕೆ ಉತ್ತರ ನೀಡಿರುವ ಕಂಗುಜಮ್‌, ‘ಪ್ರಿಯ ನರೇಂದ್ರ ಮೋದಿ ಅವರೇ, ನೀವು ನನ್ನ ಕೂಗನ್ನು ಕೇಳಿಸಿಕೊಳ್ಳದೇ ಇದ್ದರೆ, ನನಗೆ ನಿಮ್ಮ ಗೌರವ ಬೇಡ. ಪ್ರೇರಣೆ ನೀಡುವ ಮಹಿಳೆ ಎಂಬುದಾಗಿ ನನ್ನನ್ನು ಆಯ್ಕೆ ಮಾಡಿದಕ್ಕಾಗಿ ಧನ್ಯವಾದ. ಬಹಳ ವಿಚಾರ ಮಾಡಿದ ನಂತರ ಈ ಗೌರವವನ್ನು ತಿರಸ್ಕರಿಸಲು ನಿರ್ಧರಿಸಿದ್ದೇನೆ. ಜೈ ಹಿಂದ್‌’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.