ADVERTISEMENT

ಚೈಲ್ಡ್‌ಲೈನ್ ಕಾರ್ಯವ್ಯಾಪ್ತಿ ವಿಸ್ತರಣೆ

ಪಿಟಿಐ
Published 15 ಜುಲೈ 2018, 18:41 IST
Last Updated 15 ಜುಲೈ 2018, 18:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಕಷ್ಟ ಪರಿಸ್ಥಿತಿಯಲ್ಲಿ ಸಿಲುಕಿರುವ ಮಕ್ಕಳ ನೆರವಿಗಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಆರಂಭಿಸಿರುವ ಚೈಲ್ಡ್‌ಲೈನ್ ಸಹಾಯವಾಣಿಯ ಕಾರ್ಯವ್ಯಾಪ್ತಿ ವಿಸ್ತರಣೆಯಾಗಿದೆ.

ಸಹಾಯವಾಣಿ ಸಂಖ್ಯೆ 1098‌

––––––

ADVERTISEMENT

ದೇಶದಾದ್ಯಂತ ಕಾರ್ಯವ್ಯಾಪ್ತಿ

ಜುಲೈ: 450 ಸ್ಥಳಗಳು (76 ರೈಲ್ವೆ ನಿಲ್ದಾಣಗಳು ಸೇರಿ)

ಜೂನ್‌: 435 ಸ್ಥಳಗಳು (60 ರೈಲ್ವೆ ನಿಲ್ದಾಣಗಳು ಸೇರಿ)

–––––

1.4 ಕೋಟಿ

2017–18ರಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ

40,000

ಮಕ್ಕಳಿಗೆ ಸಹಾಯವಾಣಿ ಮೂಲಕ ನೆರವು

–––––

ಚೈಲ್ಡ್‌ಲೈನ್ ಹೀಗಿದೆ..

ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್ ಮೂಲಕ ಸಹಾಯವಾಣಿ ಕಾರ್ಯಾಚರಣೆ ನಡೆಸುತ್ತಿದೆ

ನಾಪತ್ತೆಯಾಗಿರುವ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಕಲ್ಪಿಸುವುದು ಇದರ ಮುಖ್ಯ ಉದ್ದೇಶ

ಮಕ್ಕಳ ಕಳ್ಳಸಾಗಣೆ ನಡೆಯುವ ಸಾಧ್ಯತೆಯಿರುವ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಗುರುತಿಸಿ, ಅಲ್ಲಿ ಚೈಲ್ಡ್‌ಲೈನ್ ಕಾರ್ಯಾಚರಣೆ

ಈ ಸಂಬಂಧ ರೈಲ್ವೆ ಇಲಾಖೆ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಗಳು ಒಪ್ಪಂದ ಮಾಡಿಕೊಂಡಿವೆ.

ಮನೆಯಿಂದ ಓಡಿಬರುವ, ರೈಲ್ವೆ ನಿಲ್ದಾಣಗಳಲ್ಲಿ ಪತ್ತೆಯಾಗುವ, ಅಪಹರಣಕ್ಕೊಳಗಾಗಿರುವ ಅಥವಾ ಕಳ್ಳಸಾಗಣೆ ಜಾಲಕ್ಕೆ ಸಿಲುಕಿರುವ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಇದರ ಜವಾಬ್ದಾರಿ.

ತಮ್ಮ ಬಳಿ ಸಹಾಯಕ್ಕಾಗಿ ಎದುರು ನೋಡುತ್ತಿರುವ ಮಕ್ಕಳ ಬಗ್ಗೆ ಪ್ರಯಾಣಿಕರಲ್ಲಿ ಅರಿವು ಮೂಡಿಸಲು ರೈಲುಗಳಲ್ಲಿ 2 ಲಕ್ಷ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

––––

ತಮ್ಮ ಮಕ್ಕಳು ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ ತುರ್ತು ಸಹಾಯವಾಣಿಗೆ ಕರೆ ಮಾಡುವಂತೆ ಪೋಷಕರು ತಿಳಿಸಬೇಕು

–ಸಚಿವಾಲಯದ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.