ADVERTISEMENT

ಜಾರ್ಖಂಡ್ | ಗೋಲ್‌ಗಪ್ಪಾ ಸೇವನೆ: ಮಕ್ಕಳು, ಮಹಿಳೆಯರು ಸೇರಿದಂತೆ 50 ಮಂದಿ ಅಸ್ವಸ್ಥ

ಪಿಟಿಐ
Published 21 ಅಕ್ಟೋಬರ್ 2023, 10:54 IST
Last Updated 21 ಅಕ್ಟೋಬರ್ 2023, 10:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೊಡೆರ್ಮಾ: ರಸ್ತೆಬದಿಯ ‘ಗೋಲ್‌ಗಪ್ಪಾ’ ಸೇವಿಸಿ 40 ಮಕ್ಕಳು ಹಾಗೂ 10 ಮಹಿಳೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ.

ನಗರದ ಲೋಕೈ ಪಂಚಾಯತ್‌ ವ್ಯಾಪ್ತಿಯ ಗೋಸೈನ್‌ ಟೋಲಾದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರ ಬಳಿ ಮಕ್ಕಳು ಮತ್ತು ಮಹಿಳೆಯರು ‘ಗೋಲ್‌ಗಪ್ಪಾ’ ಸೇವಿಸಿದ್ದು, ಕಲುಷಿತ ಆಹಾರದಿಂದಾಗಿ ಬಳಲುತ್ತಿದ್ದಾರೆ ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.

ADVERTISEMENT

‘ಗೋಲ್‌ಗಪ್ಪಾ’ ಸೇವಿಸಿದ ನಂತರ ಮಕ್ಕಳು ಮತ್ತು ಮಹಿಳೆಯರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ಅವರನ್ನು ಕೊಡೆರ್ಮಾದ ಸದರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಗೋಲ್‌ಗಪ್ಪಾ’ ಮಾರಾಟಗಾರರ ಬಳಿ ಇದ್ದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಹಾರ ಮಾದರಿಯನ್ನು ಪರೀಕ್ಷೆಗಾಗಿ ರಾಂಚಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.