ADVERTISEMENT

ಚೀನಾಕ್ಕೆ ತೆರಳುತ್ತಿದ್ದ ವಿಮಾನ ವೈದ್ಯಕೀಯ ತುರ್ತುಭೂಸ್ಪರ್ಶ; ಬಾಲಕಿ ಸಾವು

ಪಿಟಿಐ
Published 26 ಸೆಪ್ಟೆಂಬರ್ 2024, 14:25 IST
Last Updated 26 ಸೆಪ್ಟೆಂಬರ್ 2024, 14:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ವಿಮಾನದಲ್ಲಿ ಬಾಲಕಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ, ಬಾಗ್ದಾದ್‌ನಿಂದ ಚೀನಾದ ಗೌಂಗ್‌ಝೌನತ್ತ ತೆರಳುತ್ತಿದ್ದ ಇರಾಕ್‌ನ ವಿಮಾನವೊಂದು ಕೋಲ್ಕತ್ತ ವಿಮಾನ ನಿಲ್ದಾಣದಲ್ಲಿ ಬುಧವಾರ ರಾತ್ರಿ ತುರ್ತು ಭೂಸ್ಪರ್ಶ ಮಾಡಿತು.

ವಿಮಾನ ಇಳಿದ ತಕ್ಷಣವೇ ಇರಾಕ್‌ನ ಬಾಲಕಿಯನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ, ಬಾಲಕಿಯು ಮೃತಪಟ್ಟಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘100 ಪ್ರಯಾಣಿಕರು ಹಾಗೂ 15 ಸಿಬ್ಬಂದಿ ಪ್ರಯಾಣಿಸುತ್ತಿದ್ದ ಐಎ–473 ವಿಮಾನವನ್ನು ಬುಧವಾರ ರಾತ್ರಿ 10.18ರ ವೇಳೆಗೆ ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಬೋಸ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ತಕ್ಷಣವೇ ಅವರಿಗೆ ಚಿಕಿತ್ಸೆ ಒದಗಿಸಲು ವೈದ್ಯಕೀಯ ತಂಡವು ನಿಲ್ದಾಣದಲ್ಲಿ ಸನ್ನದ್ಧವಾಗಿತ್ತು’ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರ ಡೆರನ್‌ ಸಮೀರ್‌ ಅಹಮ್ಮದ್‌ ತಿಳಿಸಿದರು.

ADVERTISEMENT

‘ನಿಲ್ದಾಣದಲ್ಲಿ ಕೆಳಗಿಳಿಯುವ 30 ನಿಮಿಷಕ್ಕೂ ಮುನ್ನ ಬಾಲಕಿಯು ತೀವ್ರ ಅಸ್ವಸ್ಥರಾಗಿದ್ದರು. ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿಯು ಬಾಲಕಿಯ ಹೃದಯಬಡಿತ ಗಮನಿಸುವ ವೇಳೆಗಾಗಲೇ ಅದು ಸ್ಥಬ್ದಗೊಂಡಿತ್ತು. ತಕ್ಷಣವೇ, ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗುರುವಾರ ಬೆಳಿಗ್ಗೆ 1.18ರ ವೇಳೆ ಬಾಲಕಿ ಹಾಗೂ ಅವರ ಜತೆಗಿದ್ದ ಮತ್ತಿಬ್ಬರನ್ನು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, 1.49ರ ವೇಳೆಗೆ ವಿಮಾನವು ಕೋಲ್ಕತ್ತದಿಂದ ಹೊರಟಿತು’ ಎಂದರು.

‘ಮೃತರು, ಇರಾಕ್‌ನ ರಾಜಧಾನಿ ಬಾಗ್ದಾದ್‌ನ ಚರ್‌ ಚಿನಾರ್ ಪೊಲೀಸ್‌ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಗುರುತಿಸಲಾಗಿದೆ’ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.