ADVERTISEMENT

ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರು ಚೀನಾದ ಕಡೆಯಲ್ಲಿ ಪತ್ತೆ: ಕಿರಣ್ ರಿಜಿಜು

ಏಜೆನ್ಸೀಸ್
Published 8 ಸೆಪ್ಟೆಂಬರ್ 2020, 13:01 IST
Last Updated 8 ಸೆಪ್ಟೆಂಬರ್ 2020, 13:01 IST
ಐವರು ಕಣ್ಮರೆಯಾಗಿದ್ದ ಅರುಣಾಚಲ ಪ್ರದೇಶದ ಜಾಗ
ಐವರು ಕಣ್ಮರೆಯಾಗಿದ್ದ ಅರುಣಾಚಲ ಪ್ರದೇಶದ ಜಾಗ   

ನವದೆಹಲಿ: ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರು ವ್ಯಕ್ತಿಗಳು ತಮ್ಮ (ಚೀನಾ) ಕಡೆಯಲ್ಲಿ ಪತ್ತೆಯಾಗಿರುವುದಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ದೃಢಪಡಿಸಿದೆ ಮತ್ತು ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು, 'ಭಾರತೀಯ ಸೇನೆಯು ಕಳುಹಿಸಿದ ಹಾಟ್‌ಲೈನ್ ಸಂದೇಶಕ್ಕೆ ಚೀನಾದ ಪಿಎಲ್‌ಎ ಪ್ರತಿಕ್ರಿಯಿಸಿದೆ. ಅರುಣಾಚಲ ಪ್ರದೇಶದಿಂದ ಕಾಣೆಯಾದ ಯುವಕರು ಚೀನಾದ ಕಡೆಯಲ್ಲಿ ಪತ್ತೆಯಾಗಿರುವುದಾಗಿ ಅವರು ಖಚಿತಪಡಿಸಿದ್ದಾರೆ. ಭಾರತಕ್ಕೆ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 1 ರಿಂದ ನಾಪತ್ತೆಯಾಗಿದ್ದ ಐವರು,ಚೀನಾ ಗಡಿಯಲ್ಲಿ ದೂರವ್ಯಾಪ್ತಿಯ ಗಸ್ತು ತಿರುಗುವ ಸಣ್ಣ ಸಣ್ಣ 'ಎಲ್‌ಆರ್‌ಆರ್‌ಪಿ' ತುಕಡಿಗಳಿಗೆ ಇವರು ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಹೊರೆಯಾಳುಗಳಾಗಿದ್ದರು. ಇವರ ವಯಸ್ಸು 18ರಿಂದ 22ರ ಆಸುಪಾಸಿನಲ್ಲಿತ್ತು. ಕೆಲ ವಿದ್ಯಾರ್ಥಿಗಳೂ ಇದ್ದರು. ಸೆ.1ರಿಂದ ಇವರು ನಾಪತ್ತೆಯಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.