ADVERTISEMENT

ಚೀನಾ ಗಣಿ ಕುಸಿತ: ರಕ್ಷಣಾ ಕಾರ್ಯಾಚರಣೆ ಸ್ಥಗಿತ

ಏಜೆನ್ಸೀಸ್
Published 8 ಮಾರ್ಚ್ 2023, 14:55 IST
Last Updated 8 ಮಾರ್ಚ್ 2023, 14:55 IST
.
.   

ಬೀಜಿಂಗ್‌ (ಎಎಫ್‌ಪಿ): ಕಳೆದ ತಿಂಗಳು ಸಂಭವಿಸಿದ ಕಲ್ಲಿದ್ದಲು ಗಣಿ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 53 ಮಂದಿ ‘ಮೃತಪಟ್ಟಿದ್ದಾರೆ ಅಥವಾ ಕಾಣೆಯಾಗಿದ್ದಾರೆ’ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆ.22ರಂದು ಚೀನಾದ ಮಂಗೋಲಿಯಾ ಪ್ರದೇಶದಲ್ಲಿ ಸಂಭವಿಸಿದ ಕಲ್ಲಿದ್ದಲು ಗಣಿ ಕುಸಿತದಲ್ಲಿ ಹಲವು ಜನರು ಮತ್ತು ವಾಹನಗಳು ಅವಶೇಷಗಳಡಿ ಸಿಲುಕಿದ್ದವು. ಮೊದಲಿಗೆ ಘಟನಾ ಸ್ಥಳದಿಂದ ಆರು ಮಂದಿಯನ್ನು ರಕ್ಷಿಸಲಾಗಿತ್ತು. ಇದೇ ವೇಳೆ ಆರು ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿತ್ತು.

ಉಳಿದ 47 ಕಾರ್ಮಿಕರ ರಕ್ಷಣೆಗೆ ತೀವ್ರ ಹುಡುಕಾಟ ಆರಂಭಿಸಲಾಗಿತ್ತು. ಆದರೆ, ಘಟನೆ ನಡೆದು ಎರಡು ವಾರಗಳು ಕಳೆದರೂ ಒಬ್ಬರೂ ಪತ್ತೆಯಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.