ADVERTISEMENT

ಭಾರತ–ಚೀನಾ ಗಡಿ ಒಪ್ಪಂದಗಳಿಗೆ ಮನಮೋಹನ್ ಸಿಂಗ್ ಕೊಡುಗೆ ಶ್ಲಾಘಿಸಿದ ಚೀನಾ

ಪಿಟಿಐ
Published 27 ಡಿಸೆಂಬರ್ 2024, 10:46 IST
Last Updated 27 ಡಿಸೆಂಬರ್ 2024, 10:46 IST
<div class="paragraphs"><p>ದಕ್ಷಿಣ ಆಫ್ರಿಕಾದ ಡರ್ಬನ್‌ನ `ಬ್ರಿಕ್ಸ್' ರಾಷ್ಟ್ರಗಳ 5ನೇ ಶೃಂಗಸಭೆಯಲ್ಲಿ (ಎಡದಿಂದ) ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಂದಿನ ಅಧ್ಯಕ್ಷ ಜಾಕೊಬ್ ಝುಮಾ ಮತ್ತಿತರರು.</p><p></p></div>

ದಕ್ಷಿಣ ಆಫ್ರಿಕಾದ ಡರ್ಬನ್‌ನ `ಬ್ರಿಕ್ಸ್' ರಾಷ್ಟ್ರಗಳ 5ನೇ ಶೃಂಗಸಭೆಯಲ್ಲಿ (ಎಡದಿಂದ) ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ದಕ್ಷಿಣ ಆಫ್ರಿಕಾದ ಅಂದಿನ ಅಧ್ಯಕ್ಷ ಜಾಕೊಬ್ ಝುಮಾ ಮತ್ತಿತರರು.

   

ಔ: ಸಂಗ್ರಹ ಚಿತ್ರ

ADVERTISEMENT

ಬೀಜಿಂಗ್: ಗುರುವಾರ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕಾರ್ಯವೈಖರಿಯನ್ನು ಅಭಿನಂದಿಸುವ ಮೂಲಕ ನೆರೆಯ ಚೀನಾ ಶ್ರದ್ಧಾಂಜಲಿ ಸಲ್ಲಿಸಿದೆ.

ಭಾರತ ಮತ್ತು ಚೀನಾ ಸಂಬಂಧ ವೃದ್ಧಿಗೆ ಧನಾತ್ಮಕ ಕೊಡುಗೆ ಹಾಗೂ ಭಾರತ–ಚೀನಾ ಗಡಿ ಗೊಂದಲ ನಿವಾರಣೆಗೆ ಅವರ ಅವಧಿಯಲ್ಲಿ ಮಾಡಿಕೊಂಡ ಪ್ರಮುಖ ಒಪ್ಪಂದಗಳನ್ನು ಶ್ಲಾಘಿಸಿದೆ.

ಭಾರತದ ಹಿರಿಯ ರಾಜಕಾರಣಿ ಮತ್ತು ಹೆಸರಾಂತ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್ ಅವರು, ಭಾರತ–ಚೀನಾ ಸಂಬಂಧ ವೃದ್ಧಿಗೆ ಧನಾತ್ಮಕ ಕೊಡುಗೆ ನೀಡಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಚೀನಾ ಮತ್ತು ಭಾರತವು ಶಾಂತಿ ಮತ್ತು ಸಮೃದ್ಧಿಗಾಗಿ ಕಾರ್ಯತಂತ್ರದ ಸಹಕಾರ ಪಾಲುದಾರಿಕೆಯನ್ನು ಸ್ಥಾಪಿಸುವುದಾಗಿ ಘೋಷಿಸಿದವು. ಭಾರತ-ಚೀನಾ ಗಡಿ ಗೊಂದಲ ಇತ್ಯರ್ಥಕ್ಕೆ ರಾಜಕೀಯ ನಿಯತಾಂಕಗಳು ಮತ್ತು ಮಾರ್ಗದರ್ಶಿ ಸೂತ್ರಗಳ ಕುರಿತು ಒಪ್ಪಂದಕ್ಕೆ ಬಂದವು ಎಂದು ವರು ಹೇಳಿದ್ದಾರೆ.

ಸಿಂಗ್ ಅವರ ನಿಧನಕ್ಕೆ ಚೀನಾ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ಭಾರತ ಸರ್ಕಾರ, ಜನರು ಹಾಗೂ ಸಿಂಗ್ ಅವರ ಕುಟುಂಬಕ್ಕೆ ತನ್ನ ಸಂತಾಪ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಸಿಂಗ್ ಗುರುವಾರ ರಾತ್ರಿ ದೆಹಲಿಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಇತಿಹಾಸ ಪ್ರಾಧ್ಯಾಪಕರಾದ ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.