ADVERTISEMENT

ಗಾಲ್ವಾನ್‌ ಘರ್ಷಣೆಯಲ್ಲಿದ್ದ ಚೀನಾ ಸೈನಿಕನ ಕೈಗೆ ಚಳಿಗಾಲದ ಒಲಿಂಪಿಕ್‌ ಜ್ಯೋತಿ!

ಏಜೆನ್ಸೀಸ್
Published 3 ಫೆಬ್ರುವರಿ 2022, 6:11 IST
Last Updated 3 ಫೆಬ್ರುವರಿ 2022, 6:11 IST
ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದಿರುವ ಚೀನಾ ಸೇನೆ ಅಧಿಕಾರಿ
ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದಿರುವ ಚೀನಾ ಸೇನೆ ಅಧಿಕಾರಿ    

ನವದೆಹಲಿ: ಗಾಲ್ವಾನ್‌ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನಾ ಸೇನೆಯ ಅಧಿಕಾರಿಯೊಬ್ಬರು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿದ್ದು, ಭಾರತದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದ ‘ಪೀಪಲ್ಸ್ ಲಿಬರೇಶನ್ ಆರ್ಮಿ (ಚೀನಾ ಸೇನೆ)’ಯ ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ 2020ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಘರ್ಷಣೆಯಲ್ಲಿ ಭಾಗಿಯಾಗಿಯಾಗಿದ್ದ ಕ್ವಿ ತಲೆಗೆ ಗಂಭೀರ ಗಾಯವಾಗಿತ್ತು.

ಘರ್ಷಣೆಯಲ್ಲಿ ಭಾರತದ ಕನಿಷ್ಠ 20 ಸೈನಿಕರು, ನಾಲ್ಕು ಚೀನೀ ಸೈನಿಕರು ಮೃತಪಟ್ಟಿದ್ದರು. ಆದರೂ, ಚೀನಾ ತನ್ನ ಕಡೆಯ ಸಾವುನೋವುಗಳನ್ನು ಒಪ್ಪಿಕೊಂಡಿದ್ದು 8 ತಿಂಗಳ ನಂತರ.

ADVERTISEMENT

ಜ್ಯೋತಿ ಹಿಡಿದ ಕ್ವಿ ಫಾಬಾವೊರನ್ನು ಅಲ್ಲಿನ ಸುದ್ದಿ ಮಾಧ್ಯಮ ‘ಗ್ಲೋಬಲ್‌ ಟೈಮ್ಸ್‌’ ಹೀರೊ ಎಂದು ಕೊಂಡಾಡಿದೆ.

ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನ ಜ್ಯೋತಿಯನ್ನು 1,200 ಮಂದಿ ಹಿಡಿದು ಸಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.