ADVERTISEMENT

ಚೀನಾದ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಲಿರುವ ಮೂವರು ಗಗನಯಾನಿಗಳು

ಪಿಟಿಐ
Published 28 ನವೆಂಬರ್ 2022, 12:03 IST
Last Updated 28 ನವೆಂಬರ್ 2022, 12:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌ (ಪಿಟಿಐ): ನಿರ್ಮಾಣ ಹಂತದಲ್ಲಿರುವ ಬಾಹ್ಯಾಕಾಶ ಕೇಂದ್ರಕ್ಕೆ ಚೀನಾ ಮಂಗಳವಾರ ಮೂವರು ಗಗನಯಾತ್ರಿಗಳನ್ನು ಕಳುಹಿಸಲಿದೆ. ಇದೇ ವೇಳೆ ಅದು ಮಾನವಸಹಿತ ಚಂದ್ರಯಾನ ಯೋಜನೆ ಕುರಿತು ಘೋಷಣೆ ಮಾಡಲಿದೆ.

ಫೈ ಜುನ್ಲಾಂಗ್‌, ಡೆಂಗ್‌ ಕ್ವಿಂಗ್‌ಮಿಂಗ್‌ ಮತ್ತು ಝಾಂಗ್‌ ಲು ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೂವರು ಗಗನಯಾತ್ರಿಗಳು.

‘ಗಗನಯಾತ್ರಿಗಳನ್ನು ಹೊತ್ತ ಶೆಂಝೌ–15 ಬಾಹ್ಯಾಕಾಶ ನೌಕೆಯು ವಾಯವ್ಯ ಚೀನಾದ ಜಿಯುಕ್ವಾನ್‌ನಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ತೆರಳಲಿದೆ’ ಎಂದುಚೀನಾದ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.