ADVERTISEMENT

ಭಾರತ –ಆಸಿಯಾನ್‌ ನೌಕಾಪಡೆ ತಾಲೀಮು ತಾಣ ಪ್ರವೇಶಿಸಿದ ಚೀನಾದ ದೋಣಿ

ರಾಯಿಟರ್ಸ್
Published 8 ಮೇ 2023, 19:35 IST
Last Updated 8 ಮೇ 2023, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ಹನೋಯ್: ಭಾರತ –ಆಸಿಯಾನ್‌ ರಾಷ್ಟ್ರಗಳ ನೌಕಾಪಡೆಗಳ ತಾಲೀಮು ನಡೆಸುತ್ತಿದ್ದ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಗೆ ಚೀನಾದ ನೌಕಾಪಡೆಗೆ ಸೇರಿದ ದೋಣಿ ಪ್ರವೇಶಿಸಿತ್ತು.

ಸೋಮವಾರ ಈ ಘಟನೆ ನಡೆದಿದ್ದು, ನೌಕಾಪಡೆಗಳ ತಾಲೀಮು ಚಟುವಟಿಕೆಗೆ ಭಂಗ ತರುವುದು ಚೀನಾದ ಉದ್ದೇಶವಾಗಿರುವಂತಿದೆ ಎಂದು ವಿಯೆಟ್ನಾಂನ ಪರಿಣತರೊಬ್ಬರು ಅಭಿಪ್ರಾಯಪಟ್ಟರು.

ದೋಣಿ ಪ್ರವೇಶದ ಉದ್ದೇಶ ಕುರಿತಂತೆ ಚೀನಾ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಪ್ರತಿಕ್ರಿಯಿಸಲು ಭಾರತ ಮತ್ತು ವಿಯೆಟ್ನಾಂ ಸರ್ಕಾರಗಳು ನಿರಾಕರಿಸಿವೆ.

ADVERTISEMENT

ಆಸಿಯಾನ್‌ ದೇಶಗಳ ನೌಕಾಪಡೆ ತಾಲೀಮು (ಎಐಎಂಇ 2023) ಭಾನುವಾರ ಇಲ್ಲಿ ಆರಂಭವಾಗಿದೆ. ಭಾರತ, ವಿಯೆಟ್ನಾಂ, ಥಾಯ್ಲೆಂಡ್‌, ಫಿಲಿಪ್ಪೀನ್ಸ್, ಇಂಡೋನೇಷ್ಯಾ, ಬ್ರೂನೆ ದೇಶಗಳು ಭಾಗವಹಿಸಿವೆ. 

ಭಾರತದ ನೌಕಾಪಡೆಯು ಚೀನಾದ ಕನಿಷ್ಠ ಐದು ದೋಣಿಗಳ ಸಂಚಾರವನ್ನು ಗುರುತಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದಕ್ಷಿಣ ಚೀನಾದ ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿಯ ಮ್ಯೋಷು ಯೋಜನೆಯ ನೇತೃತ್ವ ವಹಿಸಿರುವ ರೇ ಪೋವೆಲ್‌ ಅವರು, ದೋಣಿಯು ಕ್ವಿಯೊಂಗ್ ಸಾನ್ಷಾ ಯು ಸೇನೆ ತುಕಡಿಗೆ ಸೇರಿದ್ದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.