ADVERTISEMENT

ಬಾಲಿಯಲ್ಲಿ ನಡೆಯುವ ‌ಜಿ20, ಅಪೆಕ್‌ ಸಮ್ಮೇಳನಗಳಲ್ಲಿ ಷಿ ಜಿನ್‌ಪಿಂಗ್‌ ಭಾಗಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 12:34 IST
Last Updated 11 ನವೆಂಬರ್ 2022, 12:34 IST
ಷಿ ಜಿನ್‌ಪಿಂಗ್‌
ಷಿ ಜಿನ್‌ಪಿಂಗ್‌   

ಬೀಜಿಂಗ್‌: ಇಂಡೋನೇಷ್ಯಾದ ಬಾಲಿಯಲ್ಲಿನವೆಂಬರ್‌ 14ರಿಂದ 17ರವರೆಗೆ ನಡೆಯಲಿರುವ ಜಿ20 ನಾಯಕರ ಸಮ್ಮೇಳನದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಅಲ್ಲಿಯ ವಿದೇಶಾಂಗ ಸಚಿವಾಲಯ ಶುಕ್ರವಾರ ತಿಳಿಸಿದೆ.

ಬ್ಯಾಂಕಾಕ್‌ನಲ್ಲಿ ನವೆಂಬರ್‌ 17ರಿಂದ 19ರವರೆಗೆ ನಡೆಯಲಿರುವ ಏಷ್ಯಾ– ಪೆಸಿಫಿಕ್‌ ಆರ್ಥಿಕ ಸಹಕಾರ (ಅಪೆಕ್‌) ಸಮ್ಮೇಳನದಲ್ಲೂ ಜಿನ್‌ಪಿಂಗ್‌ ಭಾಗಹಿಸಲಿದ್ದಾರೆ. ಮೂರನೇ ಭಾರಿಗೆ ಚೀನಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಅವರು ಹಮ್ಮಿಕೊಂಡಿರುವ ವಿದೇಶ ಪ್ರವಾಸಗಳು ಇವಾಗಿವೆ.

ಈ ಸಮ್ಮೇಳನಗಳದ ವೇಳೆ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌, ಅರ್ಜೆಂಟೀನಾ ಅಧ್ಯಕ್ಷ ಅಲ್ಬರ್ಟೊ ಫರ್ನಾಂಡಿಸ್‌ ಹಾಗೂ ಇತರ ಜಾಗತಿಕ ನಾಯಕರ ಜೊತೆ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬೈಡನ್‌ ಜೊತೆ ಇದೇ ಮೊದಲ ಬಾರಿಗೆ ಅವರು ಮುಖತಃ ಸಮಾಲೋಚನೆ ನಡೆಸಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಅವರೂ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.