ADVERTISEMENT

4, 5 ರಂದು ಹನುಮಾನ್‌ ಚಾಲಿಸ ಪಠಿಸಿ, ದೀಪ ಬೆಳಗಲು ಮಧ್ಯಪ್ರದೇಶ ಸಿಎಂ ಮನವಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಿಮಿತ್ತ ಸಿಎಂ ಅವರಿಂದ ಈ ಕೋರಿಕೆ

ಪಿಟಿಐ
Published 3 ಆಗಸ್ಟ್ 2020, 9:52 IST
Last Updated 3 ಆಗಸ್ಟ್ 2020, 9:52 IST
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಎರಡು ದಿನ ಬಾಕಿ ಇರುವಂತೆ, ಉತ್ತರ ಪ್ರದೇಶದ ವಾರಾಣಸಿಯ ಗಂಗಾನದಿಯ ತಟದಲ್ಲಿ ಭಾನುವಾರ ದೀಪಗಳನ್ನು ಹಚ್ಚಿಟ್ಟಿರುವ ದೃಶ್ಯ.
ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಎರಡು ದಿನ ಬಾಕಿ ಇರುವಂತೆ, ಉತ್ತರ ಪ್ರದೇಶದ ವಾರಾಣಸಿಯ ಗಂಗಾನದಿಯ ತಟದಲ್ಲಿ ಭಾನುವಾರ ದೀಪಗಳನ್ನು ಹಚ್ಚಿಟ್ಟಿರುವ ದೃಶ್ಯ.   

ಭೋಪಾಲ್: ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸುವುದಕ್ಕಾಗಿ ಆ.4 ಮತ್ತು ಆ.5ರಂದು ಸಾರ್ವಜನಿಕರು ತಮ್ಮ ಮನೆಯ ಅಂಗಳದಲ್ಲಿ ದೀಪಗಳನ್ನು ಬೆಳಗಿ, ‘ಹನುಮಾನ್‌ ಚಾಲೀಸ್‌’ ಮಂತ್ರ ಮತ್ತು ರಾಮಾಯಣದ ’ಸುಂದರಕಾಂಡ’ವನ್ನು ಪಠಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವಾರಾಜ್‌ ಸಿಂಗ್ ಚೌಹಾಣ್ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಚಿಕಿತ್ಸೆಪಡೆಯುತ್ತಿರುವ ಅವರು ಸೋಮವಾರ ಆಸ್ಪತ್ರೆಯಿಂದಲೇ ವಿಡಿಯೊ ಸಂದೇಶದ ಮೂಲಕ ಸಾರ್ವಜನಿಕರಲ್ಲಿ ಈ ರೀತಿ ಮನವಿ ಮಾಡಿದ್ದಾರೆ.

’ಆಗಸ್ಟ್ 4 ಮತ್ತು 5ರಂದು ತಮ್ಮ ತಮ್ಮ ಮನೆಗಳನ್ನುವಿದ್ಯುತ್‌ ದೀಪಗಳಿಂದ ಅಲಂಕರಿಸುವ ಮೂಲಕ ರಾಮಮಂದಿರ ಭೂಮಿ ಪೂಜೆ ಕಾರ್ಯಕ್ರಮವನ್ನು ಸಂಭ್ರಮಿಸಿ’ ಎಂದು ಮನವಿ ಮಾಡಿದ್ದಾರೆ.

ADVERTISEMENT

ಆಗಸ್ಟ್ 5 ರಂದು ಭೂಮಿ ಪೂಜೆ ಅಂಗವಾಗಿಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ’ರಾಮ ರಾಜ’ ದೇವಾಲಯ ಹಾಗೂ ಚಿತ್ರಕೂಟದಲ್ಲಿರುವ ದೇವಾಲಯಗಳು ಸೇರಿದಂತೆ ರಾಜ್ಯದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಲಿದೆ. ಆದರೆ, ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಯಾವ ಕಾರಣಕ್ಕೂ ಸಾರ್ವಜನಿಕರು ದೇವಾಲಯಗಳಿಗೆ ಗುಂಪು ಗುಂಪಾಗಿ ತೆರಳದೇ ಮನೆಯಲ್ಲಿದ್ದುಕೊಂಡೇ ಭೂಮಿ ಪೂಜೆ ಕಾರ್ಯಕ್ರಮದ ಭಾಗವಾಗುವಂತೆ’ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.