ADVERTISEMENT

ಚೆನ್ನೈನಲ್ಲಿನ ಅಮೆರಿಕ ರಾಯಭಾರ ಕಚೇರಿ ಕಾನ್ಸಲ್ ಜನರಲ್ ಆಗಿ ಕ್ರಿಸ್ಟೋಫರ್ ಹಾಡ್ಜಸ್

ಸೋಮವಾರ ಅಧಿಕಾರ ಸ್ವೀಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2023, 9:42 IST
Last Updated 1 ಆಗಸ್ಟ್ 2023, 9:42 IST
ಕ್ರಿಸ್ಟೋಫರ್ ಹಾಡ್ಜಸ್
ಕ್ರಿಸ್ಟೋಫರ್ ಹಾಡ್ಜಸ್   

ಚೆನ್ನೈ: ಯುನೈಟೆಡ್‌ ಸ್ಟೇಟ್ಸ್‌ನ ವಿದೇಶಾಂಗ ಇಲಾಖೆ ಅಧಿಕಾರಿ ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಅವರು ಚೆನ್ನೈ ನಲ್ಲಿನ ಅಮೆರಿಕ ರಾಯಭಾರ ಕಚೇರಿ ಮುಖ್ಯಸ್ಥರಾಗಿ (ಕಾನ್ಸಲ್ ಜನರಲ್) ಸೋಮವಾರ ಅಧಿಕಾರ ವಹಿಸಿಕೊಂಡರು.

ಇದಕ್ಕೂ ಮುನ್ನ ಅವರು, ಕೋಆರ್ಡಿನೇಟರ್ ಫಾರ್ ಆಫ್ಘನ್ ರಿಲೊಕೇಷನ್ ಎಫರ್ಟ್ಸ್ ಕಚೇರಿಯ ಹಿರಿಯ ಸಲಹೆಗಾರರಾಗಿದ್ದರು. ಇಸ್ರೇಲ್-ಪ್ಯಾಲೆಸ್ಟಿನಿಯನ್ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

‘ಅಮೆರಿಕ-ಭಾರತ ಸಹಭಾಗಿತ್ವದ ಮಹತ್ವದ ಹೊತ್ತಿನಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ಗೌರವ ನನ್ನದು. ನಾವು ಸ್ಥಳೀಯ ಮತ್ತು ಪ್ರಾದೇಶಿಕವಾಗಿ ಮಾಡುವ ಕೆಲಸಗಳು ಉಭಯ ದೇಶಗಳ ನಡುವಣ ಸಹಭಾಗಿತ್ವವನ್ನು ವಿಸ್ತಾರಗೊಳಿಸುವಲ್ಲಿ ಕೊಡುಗೆ ನೀಡುತ್ತವೆ’ ಎಂದು ಹಾಡ್ಜಸ್ ಅಧಿಕಾರ ಸ್ವೀಕರಿಸಿ ಹೇಳಿದ್ದಾರೆ.

‘ನಮ್ಮ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್‌ ನಿಕೊಬಾರ್‌ ದ್ವೀಪ ಸಮೂಹ, ಲಕ್ಷದ್ವೀಪ, ಪುದುಚೆರಿಗಳಲ್ಲಿ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.