ADVERTISEMENT

ಸ್ವರಕ್ಷಣೆ ತಾಲೀಮು: ಬ್ಲ್ಯಾಕ್‌ಔಟ್‌

ಪಿಟಿಐ
Published 31 ಮೇ 2025, 16:42 IST
Last Updated 31 ಮೇ 2025, 16:42 IST
ಶ್ರೀನಗರದಲ್ಲಿ ಶನಿವಾರ ಸ್ವರಕ್ಷಣೆಯ ತಾಲೀಮು ನಡೆಯಿತು   ಪಿಟಿಐ ಚಿತ್ರ
ಶ್ರೀನಗರದಲ್ಲಿ ಶನಿವಾರ ಸ್ವರಕ್ಷಣೆಯ ತಾಲೀಮು ನಡೆಯಿತು   ಪಿಟಿಐ ಚಿತ್ರ   

ಅಹಮದಾಬಾದ್‌/ಚಂಡೀಗಢ: ಆಡಳಿತ ಕೈಗೊಳ್ಳಬೇಕಾದ ಆಪತ್ಕಾಲಿಕ ಸಿದ್ಧತೆ ಹಾಗೂ ಸಾರ್ವಜನಿಕರ ಪ್ರತಿಕ್ರಿಯೆಯ ಸಾಮರ್ಥ್ಯ ಹೆಚ್ಚಿಸಲು ಜಮ್ಮು ಮತ್ತು ಕಾಶ್ಮೀರ, ಗುಜರಾತ್‌, ಪಂಜಾಬ್‌, ಹರಿಯಾಣ ಹಾಗೂ ಚಂಡೀಗಢದಲ್ಲಿ ಶನಿವಾರ ಸ್ವರಕ್ಷಣೆಯ ತಾಲೀಮು ನಡೆಯಿತು. ಇದರೊಟ್ಟಿಗೆ ಬ್ಲ್ಯಾಕ್‌ಔಟ್‌ ಸಹ ಮಾಡಲಾಯಿತು.

‘ಆಪರೇಷನ್‌ ಶೀಲ್ಡ್‌’ ಹೆಸರಿನಲ್ಲಿ ಗುಜರಾತ್‌ನ 18 ಜಿಲ್ಲೆಗಳಲ್ಲಿ ಸ್ವರಕ್ಷಣೆಯ ತಾಲೀಮು ನಡೆಯಿತು. ಈ ಸಂದರ್ಭ ಸ್ವಯಂಸೇವಕರಾಗಿ ಸಜ್ಜುಗೊಳ್ಳುವಿಕೆ, ಸಂವಹನ ವ್ಯವಸ್ಥೆಯ ಸಕ್ರಿಯಗೊಳಿಸುವಿಕೆ, ಬ್ಲ್ಯಾಕ್‌ಔಟ್‌ ಶಿಷ್ಟಾಚಾರ, ರಕ್ತದಾನ ಶಿಬಿರ ಸೇರಿದಂತೆ ಗಾಯಾಳುಗಳನ್ನು ಸ್ಥಳಾಂತರಿಸುವ ಅಣಕು ಕಾರ್ಯಾಚರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.

ಅಗ್ನಿಶಾಮಕದಳ, ಪೊಲೀಸ್‌, ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳು ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಈ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪಂಜಾಬ್‌, ಹರಿಯಾಣದಾದ್ಯಂತ ಸ್ವರಕ್ಷಣೆಯ ತಾಲೀಮು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.