ನವದೆಹಲಿ: ‘ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದಲ್ಲಿ ತುರ್ತು ಪಟ್ಟಿ ಮತ್ತು ವಿಚಾರಣೆಗಾಗಿ ಪ್ರಕರಣಗಳನ್ನು ಉಲ್ಲೇಖಿಸಲು ಹಿರಿಯ ವಕೀಲರಿಗೆ ಆ.11ರಿಂದ ಅನುಮತಿ ಇರುವುದಿಲ್ಲ’ ಎಂದು ಸುಪ್ರೀಂಕೋರ್ಟ್ ಪ್ರಕಟಣೆ ತಿಳಿಸಿದೆ.
‘ತಮ್ಮ ಕೋರ್ಟ್‌ನಲ್ಲಿ ತುರ್ತು ಪಟ್ಟಿ ಮತ್ತು ವಿಚಾರಣೆಗಾಗಿ ಪ್ರಕರಣಗಳನ್ನು ಉಲ್ಲೇಖಿಸಲು ಹಿರಿಯ ವಕೀಲರಿಗೆ ಆ.11ರಿಂದ ಅವಕಾಶ ಇರುವುದಿಲ್ಲ. ಬದಲಿಗೆ ಕಿರಿಯ ವಕೀಲರಿಗೆ ಈ ಅವಕಾಶ ಲಭಿಸಲಿದೆ’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಇತ್ತೀಚೆಗೆ ಹೇಳಿದ್ದರು.
ತುರ್ತು ಪಟ್ಟಿ ಮತ್ತು ವಿಚಾರಣೆಗಾಗಿ ಪ್ರಕರಣಗಳನ್ನು ಉಲ್ಲೇಖಿಸಲು ಹಿಂದಿನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅಳವಡಿಸಿಕೊಂಡಿದ್ದ ಪದ್ಧತಿಯನ್ನು ಬಿ.ಆರ್. ಗವಾಯಿ ರದ್ದುಪಡಿಸಿದ್ದರು. ಸಂಜೀವ್ ಖನ್ನಾ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅದುವರೆಗೆ ಜಾರಿಯಲ್ಲಿದ್ದ ಮೌಖಿಕ ಉಲ್ಲೇಖ ಪದ್ಧತಿಯನ್ನು ರದ್ದುಪಡಿಸಿದ್ದರು. ಈಗ ಬಿ.ಆರ್.ಗವಾಯಿ ಅವರು ಹಳೆಯ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.