ADVERTISEMENT

ಇಂದಿರಾರನ್ನು ಅನರ್ಹಗೊಳಿಸಿದ್ದು ‘ಮಹಾ ಧೈರ್ಯದ ತೀರ್ಪು’: ಸಿಜೆಐ ರಮಣ

ಸಂಜಯ ಪಾಂಡೆ
Published 11 ಸೆಪ್ಟೆಂಬರ್ 2021, 15:39 IST
Last Updated 11 ಸೆಪ್ಟೆಂಬರ್ 2021, 15:39 IST
ಸಿಜೆಐ ಎನ್‌.ವಿ ರಮಣ
ಸಿಜೆಐ ಎನ್‌.ವಿ ರಮಣ    

ಪ್ರಯಾಗರಾಜ್‌: ಪ್ರಧಾನಿ ಇಂದಿರಾ ಗಾಂಧಿಯವರನ್ನು ಅನರ್ಹಗೊಳಿಸಿದ ಅಲಹಾಬಾದ್ ಹೈಕೋರ್ಟ್‌ನ 1975ರ ತೀರ್ಪು ನ್ಯಾಯಾಂಗ ಇತಿಹಾಸದಲ್ಲೇ ‘ಮಹಾ ಧೈರ್ಯದ ತೀರ್ಪು’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ ರಮಣ ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಅದೇ ತೀರ್ಪು ದೇಶದಲ್ಲಿ ತುರ್ತು ಪರಿಸ್ಥಿತಿಗೂ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ಪ್ರಯಾಗರಾಜ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ನ ಹೊಸ ಸಂಕೀರ್ಣಕ್ಕೆ ಶಂಕುಸ್ಥಾಪನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿಗಳು, ‘1975 ರಲ್ಲಿ, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಜಗಮೋಹನಲಾಲ್ ಸಿನ್ಹಾ ಅವರು ಇಂದಿರಾಗಾಂಧಿ ಅವರನ್ನು ಅನರ್ಹಗೊಳಿಸಿ, ರಾಷ್ಟ್ರವನ್ನೇ ಬೆಚ್ಚಿಬೀಳಿಸಿದ ತೀರ್ಪು ನೀಡಿದರು. ಇದು ಅತ್ಯಂತ ಧೈರ್ಯದ ತೀರ್ಪು. ಇದೇ ತೀರ್ಪು ತುರ್ತುಪರಿಸ್ಥಿತಿ ಘೋಷಣೆಗೆ ನೇರವಾಗಿ ಕಾರಣವಾಯಿತೆಂದು ಹೇಳಬಹುದು, "ಎಂದು ತಿಳಿಸಿದರು.

ಆದರೆ, ತುರ್ತು ಪರಿಸ್ಥಿತಿಯ ಪರಿಣಾಮಗಳನ್ನು ವಿವರಿಸಲು ಬಯಸುವುದಿಲ್ಲ ಎಂದು ಸಿಜೆಐ ಹೇಳಿದರು.

ADVERTISEMENT

ಸಮಾಜವಾದಿ ನಾಯಕ ರಾಜ್ ನಾರಾಯಣ್ ಅವರ ಮನವಿಯ ಮೇರೆಗೆ ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯನ್ನು ಅನರ್ಹಗೊಳಿಸಿತ್ತು. ಅಲ್ಲದೆ, ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಿತ್ತು. 1971ರ ರಾಯ್‌ಬರೇಲಿ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ನಾರಾಯಣ್‌ ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.