ADVERTISEMENT

ಜ.16ಕ್ಕೆ ‘ಲೋಕಪಾಲ ದಿನ’ ಆಚರಣೆ

ಪಿಟಿಐ
Published 1 ಜನವರಿ 2025, 15:46 IST
Last Updated 1 ಜನವರಿ 2025, 15:46 IST
   

ನವದೆಹಲಿ: ‘ಇದೇ ಮೊದಲ ಬಾರಿಗೆ ಜನವರಿ 16 ಅನ್ನು ‘ಲೋಕಪಾಲ ದಿನ’ವನ್ನಾಗಿ ಆಚರಿಸಲಾಗುತ್ತಿದ್ದು, ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಪ್ರತೀ ವರ್ಷ ಜನವರಿ 16 ಅನ್ನು ‘ಲೋಕಪಾಲ ದಿನ’ವನ್ನಾಗಿ ಆಚರಿಸಬೇಕೆಂದು ಕೇಂದ್ರ ಸರ್ಕಾರ ಕಳೆದ ಮಾರ್ಚ್‌ನಲ್ಲಿಯೇ ನಿರ್ಧರಿಸಿತ್ತು. ‘ಇದೇ ವೇಳೆ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ, ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಹಾಗೂ ಪದ್ಮಭೂಷಣ ಅಣ್ಣಾ ಹಜಾರೆ ಅವರನ್ನು ಗೌರವಿಸಲಾಗುವುದು’ ಎಂದು ಕೇಂದ್ರ ಸರ್ಕಾರವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT