ಪಿಥೌರಗಡ: ಸೋಮವಾರ ಬೆಳಿಗ್ಗೆ ಮೇಘ ಸ್ಫೋಟದಿಂದ ಉತ್ತರಾಖಂಡದ ಮುನಸ್ಯಾರಿ ಬಂಗಾಪಾನಿ ಮತ್ತು ಧಾರ್‌ಚುಲಾದಲ್ಲಿ ಭಾರಿ ಮಳೆಯಾಗಿದ್ದು, ಸೆರಾಘಾಟ್ ಜಲವಿದ್ಯುತ್ ಯೋಜನೆ ಅಣೆಕಟ್ಟೆಗೆ ಹಾನಿಯಾಗಿದೆ.
ಅಣೆಕಟ್ಟೆ ಒಡೆದು ಹರಿಯುತ್ತಿರುವ ನೀರು ಮುನಸ್ಯಾರಿ ಗ್ರಾಮದಲ್ಲಿ ಮುಳಗಡೆಯ ಭೀತಿ ಸೃಷ್ಟಿಸಿದೆ. ಜನರು ಎತ್ತರದ ಸ್ಥಳಗಳಲ್ಲಿ ನಿಂತು ರಕ್ಷಣೆ ಪಡೆಯುತ್ತಿದ್ದು, ಪ್ರಾಣ ಹಾನಿ ಕುರಿತು ಈವರೆಗೆ ವರದಿಯಾಗಿಲ್ಲ.
ಭಾನುವಾರ ರಾತ್ರಿಯಿಂದ ಮಳೆ ಸುರಿಯುತ್ತಲೇ ಇರುವುದರಿಂದ ನೀರಿನ ರಭಸ ಹೆಚ್ಚಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. ಮಣ್ಣಿನ ಸಮೇತ ಮಾರುಕಟ್ಟೆ ಪ್ರವೇಶಕ್ಕೆ ನೀರು ನುಗ್ಗಿದ ಕಾರಣ ಕಟ್ಟಡಗಳಿಗೂ ಹಾನಿಯಾಗಿದೆ.
ಸರ್ಕಾರಿ ಕಚೇರಿ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ತೆರೆಯದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.