ADVERTISEMENT

ಇಡೀ ಬ್ರಿಟನ್ ಜನಾಂಗೀಯವಾದಿ ಎಂದಿಲ್ಲ: ಹಾಸ್ಯನಟ ಟ್ರೆವರ್ ನೋವಾ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 16:06 IST
Last Updated 29 ಅಕ್ಟೋಬರ್ 2022, 16:06 IST
   

ಲಂಡನ್‌ (ಪಿಟಿಐ): ಬ್ರಿಟನ್‌ ನೂತನ ಪ್ರಧಾನಿ ನೇಮಕ ಕುರಿತ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವಹಾಸ್ಯನಟ ಮತ್ತು ದೂರದರ್ಶನ ನಿರೂಪಕ ಟ್ರೆವರ್ ನೋವಾ, ‘ಇಡೀ ಬ್ರಿಟನ್ ಜನಾಂಗೀಯವಾದಿ’ ಎಂದು ಎಂದಿಗೂ ಹೇಳಿಲ್ಲ. ರಿಷಿ ಸುನಕ್ ಪ್ರಧಾನಿ ಆಗಿರುವುದನ್ನು ಬಯಸದವರಿಗೆ ಮಾತ್ರ ಪ್ರತಿಕ್ರಿಯಿಸಿದ್ದೇನೆ ಎಂದು ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ ಸುದ್ದಿ ಕಾರ್ಯಕ್ರಮ ದಿ ಡೈಲಿ ಶೋನಲ್ಲಿ, ನೋವಾ ಅವರು ಸುನಕ್ ಆಯ್ಕೆಯಾದ ಬಳಿಕ ವಿರೋಧ ವ್ಯಕ್ತವಾಗಲಿದೆ ಎಂದು ಹೇಳಿದ್ದರು.

ಅವರ ಹೇಳಿಕೆಗೆ ಬ್ರಿಟನ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಮಾಜಿ ಚಾನ್ಸೆಲರ್‌ ಮತ್ತು ಪಾಕಿಸ್ತಾನ ಮೂಲದ ಕನ್ಸರ್ವೇಟಿವ್ ಪಕ್ಷದ ನಾಯಕ ಸಾಜಿದ್ ಜಾವಿದ್ ಸೇರಿದಂತೆ ಹಲವರು ಅವರ ಹೇಳಿಕೆ ಸರಿಯಲ್ಲ ಎಂದರು.

ADVERTISEMENT

ಆದರೆ, ನೋವಾ ಅವರು, ತಮ್ಮ ಹೇಳಿಕೆ ಸಮರ್ಥಿಸಿಕೊಂಡು, ತಾನು ಜನಾಂಗೀಯವಾದಿಗಳಿಗೆ ಪ್ರತಿಕ್ರಿಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.