ADVERTISEMENT

ಆಂಧ್ರದಲ್ಲಿ ಲಸಿಕೆ ಖಾಲಿ, ತಕ್ಷಣವೇ 60 ಲಕ್ಷ ಡೋಸ್‌ಗಳನ್ನು ಪೂರೈಕೆ ಮಾಡಿ: ಜಗನ್

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 19:31 IST
Last Updated 16 ಏಪ್ರಿಲ್ 2021, 19:31 IST
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ   

ಹೈದರಾಬಾದ್: ‘ರಾಜ್ಯದಲ್ಲಿ ಕೋವಿಡ್‌-19 ಲಸಿಕೆ ಸಂಪೂರ್ಣವಾಗಿ ಖಾಲಿಯಾಗಿದೆ. ತಕ್ಷಣವೇ 60 ಲಕ್ಷ ಡೋಸ್‌ಗಳನ್ನು ರಾಜ್ಯಕ್ಕೆ ಪೂರೈಕೆ ಮಾಡಿ’ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಗೆಶುಕ್ರವಾರ ಪತ್ರ ಬರೆದಿದ್ದಾರೆ. ಈ ವಾರದಲ್ಲಿ ಅವರು ಪ್ರಧಾನಿಗೆ ಬರೆದ ಎರಡನೇ ಪತ್ರ ಇದು.

‘ನಾವು ಈವರೆಗೆ ರಾಜ್ಯದಲ್ಲಿ ಪ್ರತಿದಿನ 6.29 ಲಕ್ಷ ಡೋಸ್‌ನಷ್ಟು ಲಸಿಕೆ ನೀಡುತ್ತಿದ್ದೆವು. ಗುರುವಾರ 28,677 ಜನರಿಗಷ್ಟೇ ಲಸಿಕೆ ನೀಡಲು ಸಾಧ್ಯವಾಗಿದೆ. ಲಸಿಕೆ ಖಾಲಿಯಾದ ಕಾರಣ ಕಾರ್ಯಕ್ರಮವನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ. ನೀವು ತಕ್ಷಣವೇ ಲಸಿಕೆ ಪೂರೈಸಿದರೆ, ನಿಮ್ಮ ಮಹತ್ವಾಕಾಂಕ್ಷೆಯಂತೆ ಜನರಿಗೆ ಲಸಿಕೆ ನೀಡಲು ಸಾಧ್ಯವಾಗುತ್ತದೆ’ ಎಂದು ರೆಡ್ಡಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ತೆಲಂಗಾಣದಲ್ಲೂ ಕೊರತೆ: ತೆಲಂಗಾಣದಲ್ಲಿ ಲಸಿಕೆಯ ಸಂಗ್ರಹ ಅತ್ಯಂತ ಕಡಿಮೆ ಮಟ್ಟದಲ್ಲಿ ಇದೆ. ಆ ಲಸಿಕೆಗಳೂ ಶೀಘ್ರವೇ ಖಾಲಿಯಾಗಲಿವೆ ಎಂದು ತೆಲಂಗಾಣ ಆರೋಗ್ಯ ಇಲಾಖೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.