ADVERTISEMENT

ಮಾಧ್ಯಮ ಸಂಸ್ಥೆಗಳ ಮೇಲೆ ಐ.ಟಿ ದಾಳಿ: ಸಂಪಾದಕರ ಮಂಡಳಿ ಕಳವಳ

ಪಿಟಿಐ
Published 23 ಜುಲೈ 2021, 11:54 IST
Last Updated 23 ಜುಲೈ 2021, 11:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಸರ್ಕಾರಿ ಸಂಸ್ಥೆಗಳನ್ನು ‘ದಬ್ಬಾಳಿಕೆಯ ಅಸ್ತ್ರ’ವಾಗಿ ಬಳಸಲಾಗುತ್ತಿದೆ ಎಂದು ಭಾರತೀಯ ಸಂಪಾದಕರ ಮಂಡಳಿ ಕಳವಳ ವ್ಯಕ್ತಪಡಿಸಿದೆ.

ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ‘ದೈನಿಕ್‌ ಭಾಸ್ಕರ್’ನ ಕಚೇರಿಗಳ ಮೇಲೆವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಬೆಳವಣಿಗೆಯ ಹಿಂದೆಯೇ ಮಂಡಳಿ ಈ ಹೇಳಿಕೆ ನೀಡಿದೆ.

ದೈನಿಕ್‌ ಭಾಸ್ಕರ್ ಮತ್ತು ಲಖನೌ ಮೂಲದ ಸ್ವತಂತ್ರ ಸುದ್ದಿ ವಾಹಿನಿ ಭಾರತ್ ಸಮಾಚಾರ್ ಕಚೇರಿಗಳ ಮೇಲೆ ನಡೆದ ಐ.ಟಿ ದಾಳಿ ಬಗ್ಗೆ ಭಾರತೀಯ ಸಂಪಾದಕರ ಮಂಡಳಿ (ಇಜಿಐ) ಆತಂಕ ವ್ಯಕ್ತಪಡಿಸಿದೆ.

ADVERTISEMENT

ಈ ಕುರಿತ ಹೇಳಿಕೆಯಲ್ಲಿ ಇಜಿಐ, ‘ಕೋವಿಡ್–19 ಪಿಡುಗಿನ ಸಾವುಗಳ ಕುರಿತ ವರದಿಗಳ ನಂತರ ಈ ದಾಳಿ ನಡೆದಿದೆ. ದೈನಿಕ್ ಭಾಸ್ಕರ್ ಪತ್ರಿಕೆಯ ಸಂಪಾದಕ ಓಂ ಗೌರ್‌ ಅವರು ಇತ್ತೀಚಿಗೆ ವೆಬಿನಾರ್‌ನಲ್ಲಿ, ಸರ್ಕಾರಿ ಇಲಾಖೆಗಳಿಂದ ಬರಬೇಕಾದ ಜಾಹೀರಾತು ಪ್ರಮಾಣವು ಕಡಿಮೆಯಾಗಿರುವುದಾಗಿ ತಿಳಿಸಿದ್ದರು‘ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.