ಎಎಪಿ-ಕಾಂಗ್ರೆಸ್
(ಸಾಂದರ್ಭಿಕ ಚಿತ್ರ)
ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಎಲ್ಲಾ ವಿದ್ಯಾವಂತ ನಿರುದ್ಯೋಗಿಗಳಿಗೆ ಒಂದು ವರ್ಷ ದವರೆಗೆ ಮಾಸಿಕ ₹8,500 ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್, ‘ಯುವ ಉಡಾನ್ ಯೋಜನೆ’ ಅಡಿಯಲ್ಲಿ ನಿರುದ್ಯೋಗಿ ಗಳಿಗೆ ಆರ್ಥಿಕ ನೆರವು ನೀಡಲಾಗು ವುದು. ಆದರೆ, ಇದು ಉಚಿತವಲ್ಲ. ಕಂಪನಿ, ಕಾರ್ಖಾನೆ ಅಥವಾ ಯಾವುದೇ ಸಂಸ್ಥೆಯಲ್ಲಿ ತಮ್ಮ ಕೌಶಲದಿಂದ ಕೆಲಸ ಮಾಡಬಲ್ಲ ಯುವಜನರು ಮಾತ್ರ ಈ ನೆರವು ಪಡೆಯುತ್ತಾರೆ. ಆಯಾ ಸಂಸ್ಥೆಯೇ ಅವರಿಗೆ ಹಣ ನೀಡುತ್ತದೆ’ ಎಂದು ತಿಳಿಸಿದರು.
‘ಇದು ಮನೆಯಲ್ಲಿ ಕುಳಿತು ಹಣ ಪಡೆಯುವಂತಹ ಯೋಜನೆಯಲ್ಲ. ಯುವಕರು ತರಬೇತಿ ಪಡೆದಿರುವ ಕ್ಷೇತ್ರಗಳಲ್ಲಿಯೇ
ಕೆಲಸ ನಿರ್ವಹಿಸಲು ಬೇಕಾದ ಪ್ರಯತ್ನ ವನ್ನು ನಾವು ಮಾಡುತ್ತೇವೆ. ಇದರಿಂದ ಅವರು ತಮ್ಮ ಕೌಶಲವನ್ನು ಹೆಚ್ಚಿಸಿ ಕೊಳ್ಳಬಹುದು’ ಎಂದು ಅವರು ಹೇಳಿದರು.
‘ಪ್ಯಾರಿ ದೀದಿ ಯೋಜನೆ’ ಅಡಿಯಲ್ಲಿ ಮಹಿಳೆಯರಿಗೆ ಮಾಸಿಕ ₹2,500 ಆರ್ಥಿಕ ನೆರವು ನೀಡುವುದಾಗಿ ಜನವರಿ 6ರಂದು ಕಾಂಗ್ರೆಸ್ ಘೋಷಿಸಿತು. ‘ಜೀವನ ರಕ್ಷಾ ಯೋಜನೆ’ಯಡಿ ₹25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ನೀಡುವ ಭರವಸೆಯನ್ನೂ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.