ADVERTISEMENT

ಭಾರತ ಒಗ್ಗೂಡಿಸಿ ಯಾತ್ರೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ : ಜೈರಾಮ್ ರಮೇಶ್

ಪಿಟಿಐ
Published 8 ಸೆಪ್ಟೆಂಬರ್ 2022, 14:48 IST
Last Updated 8 ಸೆಪ್ಟೆಂಬರ್ 2022, 14:48 IST
   

ಕನ್ಯಾಕುಮಾರಿ:ಭಾರತ ಒಗ್ಗೂಡಿಸಿ ಯಾತ್ರೆಯನ್ನು ‘ಜೀವ ರಕ್ಷಕ’ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ದೇಶಾದ್ಯಂತದ ಪಕ್ಷವು ಹೊಸ ಅವತಾರದಲ್ಲಿ ಹೊರಹೊಮ್ಮುವುದನ್ನು ಸ್ನೇಹಿತರು ಅಥವಾ ರಾಜಕೀಯ ವಿರೋಧಿಗಳು ಲಘುವಾಗಿ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವಾರು ಕಾರ್ಯಕರ್ತರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3,570 ಕಿ.ಮೀ ಪ್ರಚಾರ ಪ್ರಾರಂಭಿಸುತ್ತಿದ್ದಂತೆ, ಯಾತ್ರೆಯನ್ನು ಟೀಕಿಸಿದ ಬಿಜೆಪಿಯನ್ನುಪಕ್ಷದ ಪ್ರಧಾನ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಈ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಪಕ್ಷದಲ್ಲಿ ಗಲಿಬಿಲಿ ಆಗಿರುವುದು ಸ್ಪಷ್ಟವಾಗುತ್ತದೆ ಎಂದು ಯಾತ್ರೆಯ ಬೆಳಗಿನ ಅಧಿವೇಶನದ ನಂತರ ರಮೇಶ್ ಹೇಳಿದರು.

ADVERTISEMENT

‘ಭಾರತ ಒಗ್ಗೂಡಿಸಿ ಯಾತ್ರೆಯು ಕಾಂಗ್ರೆಸ್‌ಗೆ 'ಸಂಜೀವಿನಿ' ಎಂಬುದು ಶೇ 100 ಖಚಿತ. ಇದು ಒಂದು ಜೀವ ರಕ್ಷಕ, ಇದು ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.