ADVERTISEMENT

ಅಗ್ನಿಪಥ: ವಿರೋಧ ಪಕ್ಷದ ಸದಸ್ಯರ ಪತ್ರಕ್ಕೆ ಸಹಿ ಹಾಕದ ಮನೀಶ್ ತಿವಾರಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 14:42 IST
Last Updated 11 ಜುಲೈ 2022, 14:42 IST
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ   

ನವದೆಹಲಿ:ವಿವಾದಾತ್ಮಕ ಅಗ್ನಿಪಥ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರಿಗೆ ವಿರೋಧ ಪಕ್ಷಗಳ ಸದಸ್ಯರು ಸಲ್ಲಿಸಿದ ಪತ್ರಕ್ಕೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಸೋಮವಾರ ಸಹಿ ಹಾಕಲಿಲ್ಲ.

ವಿರೋಧ ಪಕ್ಷದ ಆರು ಸಂಸದರಾದ ರಜನಿ ಪಾಟೀಲ್, ಶಕ್ತಿಸಿನ್ಹ್ ಗೋಹಿಲ್ (ಕಾಂಗ್ರೆಸ್), ಸುದೀಪ್ ಬಂಧ್ಯೋಪಾಧ್ಯಾಯ ಮತ್ತು ಸೌಗತ ರಾಯ್ (ತೃಣಮೂಲ ಕಾಂಗ್ರೆಸ್), ಸುಪ್ರಿಯಾ ಸುಳೆ (ಎನ್‌ಸಿಪಿ) ಮತ್ತು ಎ.ಡಿ ಸಿಂಗ್ (ಆರ್‌ಜೆಡಿ) ಅವರು ಯೋಜನೆಯಲ್ಲಿನ ಲೋಪದ ಬಗ್ಗೆ ವಿವರಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಪತ್ರ ಸಲ್ಲಿಸಿದ್ದಾರೆ.

ಸರ್ಕಾರ ದೇಶದಾದ್ಯಂತ ಹೆಚ್ಚಿನ ಸಮಾಲೋಚನೆ ನಡೆಸಬೇಕು ಮತ್ತು ಯೋಜನೆಯನ್ನು ಪರಾಮರ್ಶೆಗಾಗಿ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಸಂಸದರು ಪತ್ರದಲ್ಲಿ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಯೋಜನೆಗೆ ತಿವಾರಿ ಅವರು ಹಿಂದೆಯೇ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ನಂತರ ಯೋಜನೆ ಬೆಂಬಲಿಸುವ ತಮ್ಮ ಲೇಖನ ವೈಯಕ್ತಿಕವಾಗಿದ್ದು, ಪಕ್ಷಕ್ಕೆ ಸಂಬಂಧಿಸಿಲ್ಲ ಎಂದು ಸಾರ್ವಜನಿಕವಾಗಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.