ADVERTISEMENT

ಪ್ರಧಾನಿ ಮೋದಿ ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆ: ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ
Published 25 ಫೆಬ್ರುವರಿ 2026, 22:55 IST
Last Updated 25 ಫೆಬ್ರುವರಿ 2026, 22:55 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ, ಕಾಂಗ್ರೆಸ್‌ ಪಕ್ಷವು ‘ಎಪ್‌ಸ್ಟೈನ್‌ ಫೈಲ್ಸ್‌’ ವಿಚಾರ ಮುಂದಿಟ್ಟುಕೊಂಡು ಮೋದಿ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದೆ.

‘ಮೋದಿ, ಅಮೆರಿಕ ಮತ್ತು ಇಸ್ರೇಲ್‌ನ ಕೈಗೊಂಬೆ’ ಎಂದು ಆರೋಪಿಸಿರುವ ಕಾಂಗ್ರೆಸ್‌,‘ಇಸ್ರೇಲ್‌ಗೆ ಭೇಟಿಯ ಸಂದರ್ಭದಲ್ಲಿ, ಗಾಜಾದಲ್ಲಿ ನಡೆದ ನರಮೇಧ ಕುರಿತು ಮೋದಿ ಪ್ರಸ್ತಾಪಿಸುವರೇ’ ಎಂದು ಪ್ರಶ್ನಿಸಿದೆ.

‘ಇಸ್ರೇಲ್‌ನೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ ಮೋದಿ ಸರ್ಕಾರದ ನೀತಿಯನ್ನು ರೂಪಿಸಿದ್ದು ವಿದೇಶಾಂಗ ಸಚಿವಾಲಯವಲ್ಲ. ಅದನ್ನು ರೂಪಿಸಿದ್ದು ಜೆಫ್ರಿ ಎಪ್‌ಸ್ಟೈನ್‌, ಇಸ್ರೇಲ್‌ ಮಾಜಿ
ಪ್ರಧಾನಿ ಇ.ಬರಾಕ್, ಅನಿಲ್‌ ಅಂಬಾನಿ ಹಾಗೂ ಹರದೀಪ್‌ ಸಿಂಗ್‌ ಪುರಿ ಎಂಬುದಾಗಿ 2017ರ ಇ–ಮೇಲ್‌ಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ‘ಎಪ್‌ಸ್ಟೈನ್‌ ಫೈಲ್ಸ್‌’ನಲ್ಲಿ ಹೇಳಲಾಗಿದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಹೇಳಿದ್ದಾರೆ.

ADVERTISEMENT
ಅಮೆರಿಕ–ಭಾರತ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದ ರದ್ದುಗೊಳಿಸುವಂತೆ ಸವಾಲು ಹಾಕಿ 24 ಗಂಟೆಯೂ ಆಗಿಲ್ಲ. ಅಷ್ಟರೊಳಗೇ ಪ್ರಧಾನಿ ಇಸ್ರೇಲ್‌ಗೆ ಹಾರಿದ್ದಾರೆ
ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.