ADVERTISEMENT

ಕಾಂಗ್ರೆಸ್ ತನ್ನ ಅಲ್ಪಜ್ಞಾನದಿಂದ ಸೈನಿಕರ ಸ್ಥೈರ್ಯ ಕೆಡಿಸುತ್ತಿದೆ: ಜೆಪಿ ನಡ್ಡಾ

ಏಜೆನ್ಸೀಸ್
Published 20 ಜೂನ್ 2020, 13:29 IST
Last Updated 20 ಜೂನ್ 2020, 13:29 IST
ಬಿಜಿಪಿ ಅಧ್ಯಕ್ಷ ಜೆಪಿ ನಡ್ಡಾ
ಬಿಜಿಪಿ ಅಧ್ಯಕ್ಷ ಜೆಪಿ ನಡ್ಡಾ   

ನವದೆಹಲಿ: ಗಾಲ್ವನ್‌ ಕಣಿವೆ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದಕಾಂಗ್ರೆಸ್‌ ವಿರುದ್ಧಬಿಜಿಪಿ ಅಧ್ಯಕ್ಷ ಜೆಪಿ ನಡ್ಡಾ ಅವರುತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕರು ತಮ್ಮ ಅಲ್ಪ ಜ್ಞಾನದಿಂದಭಾರತೀಯ ಸೇನೆಯ ಉತ್ಸಾಹ ಕುಸಿಯುವಂತೆ ಮಾಡುತ್ತಿದೆಎಂದು ಕಿಡಿಕಾರಿದ್ದಾರೆ.

‘ಗಾಲ್ವನ್‌ ಕಣಿವೆಯಲ್ಲಿ ನಮ್ಮ ಸೇನಾಪಡೆಯನ್ನು ನಿಯೋಜಿಸಿದಾಗ ಕಾಂಗ್ರೆಸ್ ನಾಯಕರು ಟ್ವೀಟ್‌ ಮಾಡುವ ಮೂಲಕ ಸೈನಿಕರ ಸ್ಥೈರ್ಯ ಕುಸಿಯುವಂತೆ ಮಾಡುತ್ತಿದ್ದರು. ಸೈನಿಕರು ನಿರಾಯುಧರಾಗಿರುವುದೇಕೆ ಎಂದು ಪ್ರಶ್ನಿಸುತ್ತಿದ್ದರು.ಇದು ಅವರ (ವಿರೋಧ ಪಕ್ಷದವರ) ಜ್ಞಾನದ ಮಿತಿಯನ್ನು ತೋರಿಸುತ್ತದೆ. ಅವರಿಗೆ ಅಂತರರಾಷ್ಟ್ರೀಯ ಒಪ್ಪಂದಗಳ ಅರಿವಿಲ್ಲವೇ? ಎಂದು ರಾಜಸ್ಥಾನದ ಜನ ಸಂವಾದ್‌ ರ‌್ಯಾಲಿಯಲ್ಲಿ ಹೇಳಿದ್ದಾರೆ.

‘ನೀವು ಭದ್ರತಾ ಪಡೆಗಳನ್ನು ನಿರುತ್ಸಾಹಗೊಳಿಸುತ್ತಿದ್ದೀರಿ. ನಿಮ್ಮ ಭಾಷೆ! ಒಬ್ಬ ವ್ಯಕ್ತಿ ಬಳಸುವ ಮಾತುಗಳು ಅವರ ಕುಟುಂಬದ ಮೌಲ್ಯಗಳನ್ನು ತೋರ್ಪಡಿಸುತ್ತದೆ. ಇವು ನಮ್ಮ ದೇಶದ ಮೌಲ್ಯಗಳಲ್ಲ. ನೀವು ನಿಮ್ಮ ಪ್ರಧಾನಿಗೂ ಗೌರವ ನೀಡಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಗಾಲ್ವನ್‌ ಕಣಿವೆಯಲ್ಲಿ ಜೂನ್‌ 15 ಮತ್ತು 16ರ ರಾತ್ರಿ ನಡೆದ ಸಂಘರ್ಷದ ವೇಳೆ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಾದ 43 ಸೈನಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಪ್ರಧಾನಿ ಮೋದಿ ಅವರು ಕರೆದಿದ್ದ ಸರ್ವಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, ‘ಪ್ರಧಾನಿ ಮೋದಿ ಅವರು ಶುಕ್ರವಾರ ಸರ್ವಪಕ್ಷಗಳ ಸಭೆ ಕರೆದಿದ್ದರು.ಈ ವೇಳೆ ನಮ್ಮ ಭೂಪ್ರದೇಶಕ್ಕೆ ಯಾರೊಬ್ಬರೂ ಪ್ರವೇಶಿಸಿಲ್ಲ ಎಂದು ಒತ್ತಿ ಹೇಳಿದ್ದಾರೆ. ಇಡೀ ದೇಶ ಪ್ರಧಾನಿ ಮೋದಿ ಅವರೊಂದಿಗೆ ಇರುವುದಾಗಿ ಸಭೆಯಲ್ಲಿದ್ದ ಎಲ್ಲರೂ ಒಂದೇ ದ್ವನಿಯಲ್ಲಿ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ನವರು‌ ಏನಾಯಿತು, ಹೇಗಾಯಿತು, ಎಲ್ಲಿ ಸಂಭವಿಸಿತು ಎಂದು ಪ್ರಶ್ನಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ಭಾರತೀಯ ಪಡೆಗಳು, ನೆಲ, ನೀರು ಅಥವಾ ಆಕಾಶವೇ ಇರಲಿ. –ತನ್ನ ಗಡಿಯನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿವೆ ಎಂದಿದ್ದಾರೆ.

ರಾಜಸ್ಥಾನ ಜನರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ರಾಜಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಆರೋಗ್ಯ ಕ್ಷೇತ್ರವು ರಾಜ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದಿದ್ದಾರೆ. ‘ರಾಜ್ಯದಲ್ಲಿ 25 ಲಕ್ಷ ಮಾಸ್ಕ್‌ಗಳು ಮತ್ತು ಪಿಪಿಇ ಕಿಟ್‌‌ಗಳು ನಾಪತ್ತೆಯಾಗಿವೆ. ಆರೋಗ್ಯ ಕ್ಷೇತ್ರದಲ್ಲಿ ಹಗರಣ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

ಮೂಲೆಗುಂಪಾಗಿರುವ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಸರ್ಕಾರ, ಬಿಜೆಪಿ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿದೆ ಎಂದು ಕಿಡಿಕಾರಿರುವ ಅವರು, ‘ನಾವು ಸೇವಾ ಕಾರ್ಯಗಳಲ್ಲಿ ನಿರತರಾಗಿರುವ ಹೊತ್ತಿನಲ್ಲಿ, ಅವರು(ಕಾಂಗ್ರೆಸ್‌ ಸರ್ಕಾರ) ನಮ್ಮ ನಾಯಕರ ವಿರುದ್ಧ ಎಫ್‌ಐಆರ್ದಾಖಲಿಸುವುದರಲ್ಲಿ ನಿರತರಾಗಿದ್ದಾರೆ. ಅವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದು ಅವರ ಮನಸ್ಥಿತಿ. ಹೀಗಿರುವಾಗ ರಾಜಸ್ಥಾನದ ಅಭಿವೃದ್ಧಿಯ ಬಗ್ಗೆ ಯೋಚಿಸಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.