ADVERTISEMENT

ಬಾಳ ಸಂಗಾತಿ ಕುರಿತು ಕೊನೆಗೂ ಮನಬಿಚ್ಚಿ ಮಾತನಾಡಿದ ರಾಹುಲ್ ಗಾಂಧಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಡಿಸೆಂಬರ್ 2022, 5:13 IST
Last Updated 29 ಡಿಸೆಂಬರ್ 2022, 5:13 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಬಾಳ ಸಂಗಾತಿ ಕುರಿತು ಕೊನೆಗೂ ಮನಬಿಚ್ಚಿ ಮಾತನಾಡಿದ್ದಾರೆ.

ಭಾರತ್ ಜೋಡೊ ಯಾತ್ರೆ ವೇಳೆಯಲ್ಲಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ಅಜ್ಜಿ ಇಂದಿರಾ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರ ಗುಣಗಳನ್ನು ಹೊಂದಿರುವ ಸಂಗಾತಿಯೊಂದಿಗೆ ಜೀವನ ನಡೆಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಈ ಮೂಲಕ ವೈಯಕ್ತಿಕ ಜೀವನದ ಕುರಿತು ಮಾಹಿತಿಗಳನ್ನು ರಾಹುಲ್ ಗಾಂಧಿ ಹಂಚಿದ್ದಾರೆ.

ADVERTISEMENT

ಇದೊಂದು ಆಸಕ್ತಿದಾಯಕ ಪ್ರಶ್ನೆ. ನನ್ನ ಬಾಳ ಸಂಗಾತಿಗೆ ತಾಯಿ ಮತ್ತು ಅಜ್ಜಿಯ ಗುಣಗಳ ಮಿಶ್ರಣ ಹೊಂದಿದ್ದರೆ ಉತ್ತಮ ಎಂದು ಅವರು ತಿಳಿಸಿದರು.

ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 'ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ' ಎಂದು ರಾಹುಲ್ ಹೇಳಿದರು.

ಕಾರುಗಳ ಬಗ್ಗೆ ಆಸಕ್ತಿಯಿಲ್ಲ...
ಸಂದರ್ಶನದ ವೇಳೆ ಕಾರುಗಳ ಮೇಲೆ ತನಗೆ ಆಸಕ್ತಿಯಿಲ್ಲ. ಸ್ವಂತ ಕಾರನ್ನು ಹೊಂದಿಲ್ಲ ಎಂದು ಹೇಳಿದರು. ನನ್ನ ಬಳಿ ಸಿಆರ್‌-ವಿ ಕಾರು ಇದ್ದು, ಅದು ತಾಯಿಯದ್ದಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.