ADVERTISEMENT

ಕಾಂಗ್ರೆಸ್‌ನಿಂದ 'ಭಾರತ್ ಬಚಾವೋ' ರ್‍ಯಾಲಿ

ಏಜೆನ್ಸೀಸ್
Published 14 ಡಿಸೆಂಬರ್ 2019, 5:53 IST
Last Updated 14 ಡಿಸೆಂಬರ್ 2019, 5:53 IST
ಕಾಂಗ್ರೆಸ್‌ನ 'ಭಾರತ್ ಬಚಾವೋ' ರ್‍ಯಾಲಿಗೆ ರಾಮ್‌ಲೀಲಾ ಮೈದಾನದಲ್ಲಿ ಸಿದ್ಧತೆ – ಎನ್‌ಎನ್‌ಐ ಚಿತ್ರ
ಕಾಂಗ್ರೆಸ್‌ನ 'ಭಾರತ್ ಬಚಾವೋ' ರ್‍ಯಾಲಿಗೆ ರಾಮ್‌ಲೀಲಾ ಮೈದಾನದಲ್ಲಿ ಸಿದ್ಧತೆ – ಎನ್‌ಎನ್‌ಐ ಚಿತ್ರ    

ನವದೆಹಲಿ:ಪೌರತ್ವ ತಿದ್ದುಪಡಿ ಮಸೂದೆ, ರೈತರು ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಲು ಕಾಂಗ್ರೆಸ್‌ ಶನಿವಾರ ದೆಹಲಿಯಲ್ಲಿ ಬೃಹತ್‌ ರ್‍ಯಾಲಿ ಆಯೋಜಿಸಿದೆ.

'ಭಾರತ್‌ ಬಚಾವೋ (ಭಾರತ ರಕ್ಷಿಸಿ)' ರ್‍ಯಾಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಮನಮೋಹನ್‌ ಸಿಂಗ್‌, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಭಾಗಿಯಾಗಲಿದ್ದಾರೆ. ರಾಮ್‌ಲೀಲಾ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿರುದ್ಧಕಾಂಗ್ರೆಸ್‌ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ದೆಹಲಿ, ಉತ್ತರ ಪ್ರದೇಶ, ಪಂಜಾಬ್‌ ಹಾಗೂ ಹರಿಯಾಣ ರಾಜ್ಯ ಘಟಕಗಳಿಂದ ಕಾರ್ಯಕರ್ತರನ್ನು ಕಳಿಹಿಸುವಂತೆ ಸೂಚಿಸಲಾಗಿದ್ದು, ಕನಿಷ್ಠ ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ. ಜಗತ್ತಿನ ಹಲವು ಭಾಗಗಳಲ್ಲಿರುವ ಕಾಂಗ್ರೆಸ್‌ನ ಸಾಗರೋತ್ತರ ಘಟಕವೂ ಭಾರತ್‌ ಬಚಾವೋ ರ್‍ಯಾಲಿಯಲ್ಲಿ ಭಾಗಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.