ADVERTISEMENT

ಜಾರ್ಖಂಡ್‌: ಕಾಂಗ್ರೆಸ್‌ನ ಏಕೈಕ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಪಿಟಿಐ
Published 26 ಫೆಬ್ರುವರಿ 2024, 9:29 IST
Last Updated 26 ಫೆಬ್ರುವರಿ 2024, 9:29 IST
<div class="paragraphs"><p>ಬಿಜೆಪಿ ಸೇರ್ಪಡೆಯಾದ ಗೀತಾ ಕೋಡಾ</p></div>

ಬಿಜೆಪಿ ಸೇರ್ಪಡೆಯಾದ ಗೀತಾ ಕೋಡಾ

   

ಚಿತ್ರ ಕೃಪೆ: ಎಎನ್ಐ ಸ್ಕ್ರೀನ್‌ ಗ್ರ್ಯಾಬ್

ರಾಂಚಿ: ಲೋಕಸಭಾ ಚುನಾವಣೆ ಮುನ್ನ ಜಾರ್ಖಂಡ್‌ನ ಸಿಂಗ್‌ಭೂಮ್ (ಮೀಸಲು) ಕ್ಷೇತ್ರದ ಕಾಂಗ್ರೆಸ್ ಸಂಸದೆ, ಮಾಜಿ ಮುಖ್ಯಮಂತ್ರಿ ಮಧು ಕೋಡಾ ಪತ್ನಿ ಗೀತಾ ಕೋಡಾ ಅವರು ಸೋಮವಾರ ಬಿಜೆಪಿ ಸೇರ್ಪಡೆಯಾಗಿದ್ಧಾರೆ.

ADVERTISEMENT

ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಕೋಡಾ, ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು.

‘ಇಂದು ನಾನು ಬಿಜೆಪಿ ಸೇರಿದ್ದೇನೆ. ತುಷ್ಟೀಕರಣ ರಾಜಕಾರಣ ಮಾಡುವ ಮೂಲಕ ಕಾಂಗ್ರೆಸ್ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪಕ್ಷವು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುತ್ತದೆ ಎಂದು ಹೇಳುತ್ತದೆ, ಆದರೆ ಅದು ತನ್ನ ಕುಟುಂಬವನ್ನು ಮಾತ್ರ ಕರೆದುಕೊಂಡು ಹೋಗುತ್ತದೆ’ ಎಂದು ಕೋರಾ ತಮ್ಮ ರಾಜೀನಾಮೆ ಹಿಂದಿನ ಕಾರಣ ತಿಳಿಸಿದ್ದಾರೆ.

ಗೀತಾ ಕೋಡಾ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದ ಏಕೈಕ ಸಂಸದರಾಗಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಜಾರ್ಖಂಡ್‌ನ 14 ಸ್ಥಾನಗಳ ಪೈಕಿ ಬಿಜೆಪಿ-ಎಜೆಎಸ್‌ಯು ಮೈತ್ರಿಕೂಟ 12ರಲ್ಲಿ ಗೆಲುವು ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.