ADVERTISEMENT

ಪ್ರಧಾನಿಯಿಂದ ಮತಗಳ್ಳತನ, ಮತಕ್ಕೆ ಗಾಳ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 23:41 IST
Last Updated 27 ಸೆಪ್ಟೆಂಬರ್ 2025, 23:41 IST
<div class="paragraphs"><p>ಜೈರಾಮ್‌ ರಮೇಶ್‌</p></div>

ಜೈರಾಮ್‌ ರಮೇಶ್‌

   

ನವದೆಹಲಿ: ಬಿಹಾರದ 75 ಲಕ್ಷ ಮಹಿಳೆಯರಿಗೆ ತಲಾ ₹10 ಸಾವಿರದಂತೆ ನೆರವು ಒದಗಿಸುವ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

‘ಪ್ರಧಾನಿ ಅವರು ಮತಗಳ್ಳತನದ ಜೊತೆಗೆ ಮತಕ್ಕೆ ಗಾಳ ಹಾಕಲು ಆರಂಭಿಸಿದ್ದಾರೆ’ ಎಂದು ಆರೋಪಿಸಿದೆ. ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರವು 1.3 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ನೀಡುವ ‘ಗೃಹಲಕ್ಷ್ಮೀ’ ಯೋಜನೆ ಆರಂಭಿಸಿದಾಗ ಪ್ರಧಾನಿ ಟೀಕಿಸಿದ್ದರು. ಈಗ ಬಿಹಾರ ವಿಧಾನಸಭಾ ಚುನಾ ವಣೆಯ ಅಧಿಸೂಚನೆಗೆ ಬಾಕಿ ಉಳಿದಿರುವ ಕೆಲವೇ ದಿನಗಳಿಗೂ ಮುನ್ನಾ ಅವರು ಒಂದು ಸಲದ ಪಾವತಿಯಾಗಿ ಮಹಿಳೆಯರಿಗೆ ₹10 ಸಾವಿರ ವರ್ಗಾಯಿಸಿದ್ದಾರೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.