ADVERTISEMENT

ದೇಶದ ಜನರಿಗಾಗಿ ಪ್ರಧಾನಿ ಮೋದಿ ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆಯೇ?–ಕಾಂಗ್ರೆಸ್‌

ಪಿಟಿಐ
Published 26 ನವೆಂಬರ್ 2025, 11:16 IST
Last Updated 26 ನವೆಂಬರ್ 2025, 11:16 IST
<div class="paragraphs"><p>ನರೇಂದ್ರ ಮೋದಿ, ಜೈರಾಮ್ ರಮೇಶ್</p></div>

ನರೇಂದ್ರ ಮೋದಿ, ಜೈರಾಮ್ ರಮೇಶ್

   

ಕೃಪೆ: ಪಿಟಿಐ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗಾಗಿ ತಮ್ಮ ಕರ್ತವ್ಯಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ADVERTISEMENT

ಸಂವಿಧಾನ ದಿನದ ಅಂಗವಾಗಿ ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಸಾಂವಿಧಾನಿಕ ಕರ್ತವ್ಯಗಳನ್ನು ನಾಗರಿಕರು ಪೂರೈಸಬೇಕು’ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಮೋದಿ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಪೋಸ್ಟ್‌ ಹಂಚಿಕೊಂಡಿದ್ದು, 'ಸಂವಿಧಾನವನ್ನು ಪಾಲಿಸುವುದು ಹಾಗೂ ಅದರನ್ವಯ ನಡೆದುಕೊಳ್ಳುವುದು, ಭಾಷೆ, ಧರ್ಮ, ಜಾತಿ, ಪ್ರಾದೇಶಿಕತೆಯ ವೈವಿಧ್ಯತೆಗಳನ್ನು ಮೀರಿ ದೇಶದ ಜನರಲ್ಲಿ ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಮೂಡಿಸುವುದು, ವೈಜ್ಞಾನಿಕ ಮನೋಭಾವ ಮತ್ತು ಮಾನವತಾವಾದವನ್ನು ಉತ್ತೇಜಿಸುವ ಕರ್ತವ್ಯಗಳನ್ನು ಪ್ರಧಾನಿ ಮೋದಿ ಪಾಲಿಸುತ್ತಿದ್ದಾರೆಯೇ?'ಎಂದು ಪ್ರಶ್ನಿಸಿದ್ದಾರೆ.

'ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಬೇಕೆಂದರೆ ಮತದಾನದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. 18 ವರ್ಷ ಪೂರೈಸಿದವರು ಸಂವಿಧಾನ ದಿನವನ್ನು ತಮ್ಮ ಕಾಲೇಜುಗಳಲ್ಲಿ ಆಚರಿಸಿ, ಸಂಭ್ರಮಿಸಬೇಕು' ಎಂದು ಮೋದಿ ಹೇಳಿದ್ದರು.

'ಸಂವಿಧಾನ ರಚನೆಯಲ್ಲಿ ರಾಜೇಂದ್ರ ಪ್ರಸಾದ್ ಮತ್ತು ಬಿ.ಆರ್.ಅಂಬೇಡ್ಕರ್‌ ಸೇರಿದಂತೆ ಹಲವರ ಕೊಡುಗೆ ಅಪಾರ. ಅದರಂತೆಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಲ್ಲಭಾಬಾಯಿ ಪಟೇಲ್‌, ಮಹಾತ್ಮಾ ಗಾಂಧಿ, ಬಿರ್ಸಾ ಮುಂಡಾ ನಾಯಕತ್ವ ಪ್ರಮುಖವಾದದ್ದು' ಎಂದು ಮೋದಿ ಸ್ಮರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.