ADVERTISEMENT

ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, 10 ದಿನದಲ್ಲಿ ರೈತರ ಸಾಲಮನ್ನಾ ಖಚಿತ: ರಾಹುಲ್

ಏಜೆನ್ಸೀಸ್
Published 23 ನವೆಂಬರ್ 2018, 13:39 IST
Last Updated 23 ನವೆಂಬರ್ 2018, 13:39 IST
   

ವಿಧಿಶಾ(ಮಧ್ಯಪ್ರದೇಶ):ಬಿಜೆಪಿ ಸರ್ಕಾರವಿರುವಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾಕ್ಕೇರಲಿದ್ದು, ಆಡಳಿತ ಚುಕ್ಕಾಣಿ ಹಿಡಿದ ಕೇವಲ ಹತ್ತು ದಿನದೊಳಗೆ ಪ್ರತಿಯೊಬ್ಬ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಇಲ್ಲಿನ ಬಸೋಡಾದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ರಾಹುಲ್‌,ಉದ್ಯಮಿಗಳ ₹ 3.5 ಲಕ್ಷ ಕೋಟಿ ಸಾಲಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಏನನ್ನು ಮಾಡಿಲ್ಲ ಎಂದು ಟೀಕಿಸಿದರು.

‘ವಿಜಯ್ ಮಲ್ಯ ₹10,000 ಕೋಟಿ ಸಾಲ ಪಡೆದು ಪರಾರಿಯಾಗಿದ್ದಾರೆ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅವರೂಸಾವಿರಾರು ಕೋಟಿ ಹಣ ಪಡೆದು ಪಲಾಯನ ಮಾಡಿದ್ದಾರೆ.ನೀವು ಅಂತಹವರ ಸಾಲಮನ್ನಾ ಮಾಡಬಲ್ಲಿರಿ ಆದರೆ, ದೇಶದ ಬಡ ರೈತರ ವಿಚಾರದಲ್ಲಿ ಅದೇ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಾಗದಿರುವುದು ಏಕೆ?. ನೀವು ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡುವುದಾಗಿ ಹೇಳಿದ್ದೀರಿ. ಅವರ ಬದುಕನ್ನು ಬದಲಿಸುವ ಭರವಸೆ ನೀಡಿದ್ದೀರಿ. ನಾನು ಇಷ್ಟೆಲ್ಲ ಕೇಳಿದರೂ ಯಾಕೆ ನೀವು ಏನನ್ನೂ ಮಾಡುತ್ತಿಲ್ಲ. ಅವರ(ನರೇಂದ್ರ ಮೋದಿ) ಪ್ರತಿಕ್ರಿಸುತ್ತಿಲ್ಲ. ಒಂದೇ ಒಂದು ಮಾತನಾಡುತ್ತಿಲ್ಲ. ಕನಿಷ್ಠಖಜಾನೆಯಲ್ಲಿ ಹಣವಿಲ್ಲ ಎಂದಾದರೂ ಹೇಳುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯುನವೆಂಬರ್‌ 28 ರಂದು ನಡೆಯಲಿದ್ದು, ಡಿಸೆಂಬರ್‌ 11 ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.