ADVERTISEMENT

ಸಂಬಳ 8 ಸಾವಿರ: ₹3.87 ಕೋಟಿ ತೆರಿಗೆ ಬಾಕಿ!

ಡಿಜಿಟಲ್‌ ಕಳ್ಳತನ: ಕಾರ್ಮಿಕರು, ಜ್ಯೂಸ್‌ ಅಂಗಡಿಯವರ ಹೆಸರಲ್ಲಿ ಕಂಪನಿಗಳ ವ್ಯವಹಾರ * ಬಡವರಿಗೆ ಐಟಿ ನೋಟಿಸ್‌

ಪಿಟಿಐ
Published 2 ಏಪ್ರಿಲ್ 2025, 14:32 IST
Last Updated 2 ಏಪ್ರಿಲ್ 2025, 14:32 IST
ಆದಾಯ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ   

ಅಲೀಗಢ: ಇವರು ಕರಣ್‌ ಕುಮಾರ್‌ (34). ಕಟ್ಟಡ ಕಾರ್ಮಿಕ. ಇವರ ತಿಂಗಳ ಸಂಬಳ ₹15 ಸಾವಿರ. ₹33.88 ಕೋಟಿ ತೆರಿಗೆ ಬಾಕಿ ಇದೆ ಎಂದು ಹೇಳಿ ಇವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ.

ಮೋಹಿತ್‌ ಕುಮಾರ್‌ ಅವರು ಸಾರಿಗೆ ಕಂಪನಿಯೊಂದರಲ್ಲಿ ಸಣ್ಣ–ಪುಟ್ಟ ಕೆಲಸ ಮಾಡುವವರು. ಇವರ ತಿಂಗಳ ಸಂಬಳ ₹8,500. ಆದರೆ, ₹3.87 ಕೋಟಿ ತೆರಿಗೆ ಬಾಕಿ ಇದೆ ಎಂದು ಇಲಾಖೆ ನೋಟಿಸ್ ನೀಡಿದೆ.

ರಯೀಸ್‌ ಅಹಮ್ಮದ್‌ ಅವರು ಜ್ಯೂಸ್‌ ಅಂಗಡಿ ಇಟ್ಟುಕೊಂಡಿದ್ದಾರೆ. ದಿನಕ್ಕೆ ₹500ರಿಂದ ₹600 ವ್ಯಾಪಾರವಾಗುತ್ತದೆ. ₹7.79 ಕೋಟಿ ತೆರಿಗೆ ಬಾಕಿ ಇದೆ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ.

ADVERTISEMENT

****

ಮಾರ್ಚ್‌ ತಿಂಗಳೊಂದರಲ್ಲಿಯೇ ಮೂವರಿಗೂ ನೋಟಿಸ್‌ ನೀಡಲಾಗಿದೆ. ನೋಟಿಸ್‌ ನೋಡಿ ಮೂವರು ಆತಂಕಗೊಂಡಿದ್ದಾರೆ. ತಿಂಗಳಿಗೆ ಇಷ್ಟು ಸಂಬಳ ಬರುವವರು ಆದಾಯ ತೆರಿಗೆ ಪಾವತಿ ಮಾಡಲು ಅರ್ಹರಲ್ಲ.

ಆಧಾರ್‌ ಕಾರ್ಡ್‌ ಸಂಖ್ಯೆ ಅಥವಾ ಪ್ಯಾನ್‌ ಕಾರ್ಡ್‌ ಸಂಖ್ಯೆಗಳಂಥ ವೈಯಕ್ತಿಕ ದಾಖಲೆಗಳ ಮಾಹಿತಿ ಸೋರಿಕೆಯಿಂದಾಗಿ ಇಂಥ ಪ್ರಕರಣಗಳ ನಡೆಯುತ್ತಿವೆ ಎಂದು ಮೇಲುನೋಟಕ್ಕೆ ತಿಳಿದುಬಂದಿದೆ. ಮೂವರೂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.