ADVERTISEMENT

ಬುಲಂದ್‌ಶಹರ್‌ ಹಿಂಸಾಚಾರ: ಗುಂಡೇಟಿಗೂ ಮುನ್ನ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 15:02 IST
Last Updated 28 ಡಿಸೆಂಬರ್ 2018, 15:02 IST
ಸುಬೋಧ ಕುಮಾರ್‌ ಸಿಂಗ್‌
ಸುಬೋಧ ಕುಮಾರ್‌ ಸಿಂಗ್‌   

ಲಖನೌ:ಬುಲಂದ್‌ಶಹರ್‌ ಹಿಂಸಾಚಾರದ ಸಂದರ್ಭದಲ್ಲಿ ಸಯ್ನಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ಸುಬೋಧ ಕುಮಾರ್‌ ಸಿಂಗ್‌ ಅವರನ್ನು ಹತ್ತಿರದಿಂದ ಗುಂಡಿಟ್ಟು ಹತ್ಯೆಗೈಯುವ ಮುನ್ನ ಕೊಡಲಿಯಿಂದ ಹಲ್ಲೆಗೆ ಒಳಗಾಗಿದ್ದರುಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇನ್‌ಸ್ಪೆಕ್ಟರ್‌ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಪ್ರಶಾಂತ್‌ ಎಂಬುವರನ್ನುಗುರುವಾರ ಪೊಲೀಸರು ಬಂಧಿಸಿದ್ದರು. ಈತನ ಜತೆಗೆ ಕಲುವಾ ಎಂಬಾತನನ್ನು ಬಂಧಿಸಲಾಗಿತ್ತು. ಈತನೇ ಇನ್‌ಸ್ಪೆಕ್ಟರ್‌ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

‘ಕೊಡಲಿಯಿಂದ ಹಲ್ಲೆಗೊಳಗಾದ ಸುಬೋಧ ಕುಮಾರ್‌ ಸಿಂಗ್‌ ಅವರು ಸ್ಥಳದಲ್ಲೇ ಕುಸಿದುಬಿದ್ದಿದ್ದರು, ಈ ವೇಳೆ ಅಲ್ಲಿಗೆ ಬಂದ ಪ್ರಶಾಂತ್‌, ಇನ್‌ಸ್ಪೆಕ್ಟರ್‌ ಪಿಸ್ತೂಲ್‌ನಿಂದಲೇ ಅವರ ಕಣ್ಣುಗಳ ಮಧ್ಯೆ ಹತ್ತಿರದಿಂದ ಗುಂಡಿನ ದಾಳಿ ನಡೆಸಿದ್ದ’ ಎಂದು ಮಾಹಿತಿ ನೀಡಿದರು.

ADVERTISEMENT

‘ಗಂಭೀರವಾಗಿ ಗಾಯಗೊಂಡಿದ್ದ ಇನ್‌ಸ್ಪೆಕ್ಟರ್‌ ಹಲ್ಲೆ ನಡೆಸದಂತೆ ಮನವಿ ಮಾಡಿದ್ದರು. ಹೀಗಿದ್ದರೂ ಅಲ್ಲಿದ್ದ ಗುಂಪು ನಿರಂತರ ಕಲ್ಲಿನ ದಾಳಿ ನಡೆಸಿತ್ತು. ಸ್ಥಳೀಯ ಛಿಂಘಾರ್‌ವಾತಿ ಠಾಣೆಯ ಪೊಲೀಸರು ಘಟನಾ ಸ್ಥಳ ತಲುಪದಂತೆ ರಸ್ತೆ ಅಡ್ಡಲಾಗಿ ಮರ ಕಡಿದು ಹಾಕಲಾಗಿತ್ತು’ ಎಂದರು.

‘ಆರೋಪಿ ಕಲುವಾ ಹಲ್ಲೆ ನಡೆಸಿದ ಗುಂಪಿನಲ್ಲಿದ್ದ. ಮರ ಕಡಿಯುತ್ತಿದ್ದ ಈತನನ್ನು ಇನ್‌ಸ್ಪೆಕ್ಟರ್‌ ತಡೆಯಲು ಮುಂದಾದ ವೇಳೆ, ಕೊಡಲಿಯಿಂದ ಹಲ್ಲೆ ನಡೆಸಿದ್ದ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.