ನವದೆಹಲಿ: 'ಕೊರೊನಾ ಹರಡುವುದನ್ನು ತಡೆಯಲುಮನೆಯಲ್ಲೇ ಇರಿ' ಎಂಬ ಸಂದೇಶ ಸಾರುವ ಬಾಲಕಿಯ ವಿಡಿಯೊವೊಂದನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟಿಸಿದ್ದಾರೆ.
ಅಪ್ಪನಿಗೆ ಪತ್ರ ಬರೆಯುವ ಪುಟ್ಟ ಬಾಲಕಿ,ಅಪ್ಪ ನಾನು ನಿಮ್ಮನ್ನು ಮಿಸ್ ಮಾಡುತ್ತಿಲ್ಲ, ಅಮ್ಮನೂ.ನೀವು ಮನೆಗೆ ದೌಡಾಯಿಸಿ ಬರಬೇಕಿಂದಿಲ್ಲ, ಅದರ ಅಗತ್ಯವೂ ಇಲ್ಲ. ನೀವು ಎಲ್ಲಿದ್ದೀರೋ ಅಲ್ಲೇ ಇರಿ. ನೀವು ಹೊರಗೆ ಬಂದರೆ ಕೊರೊನಾ ಗೆಲ್ಲುತ್ತದೆ. ಕೊರೊನಾವನ್ನು ನಾವು ಸೋಲಿಸಬೇಕಿದೆ ಅಲ್ವಾ ಅಪ್ಪ ಎಂದು ಹೇಳುವ ವಿಡಿಯೊ ಇದಾಗಿದೆ.ಹಿರಿಯರು ಮನೆಯಿಂದ ಹೊರಗೆ ಹೋಗದಂತೆ ಮಕ್ಕಳು ನಿಗಾವಹಿಸಬೇಕು ಎಂಬ ಸಂದೇಶವಿರುವ ವಿಡಿಯೊದಲ್ಲಿ ನೀವೂ ಇದೇ ರೀತಿ ಕೊರೊನಾ ವಾರಿಯರ್ಸ್ ಆಗಿ ಎಂದು ಕರೆ ಇದೆ.
ಮೋದಿಯವರು ಟ್ವೀಟ್ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 49 ಸಾವಿರಕ್ಕಿಂತಲೂ ಹೆಚ್ಚು ಲೈಕ್ ಮತ್ತು 11ಸಾವಿರಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
ಒಂದು ದಿನದಹಿಂದೆಯಷ್ಟೇ ಅಮ್ಮ ಹೊರಗೆ ಹೋಗುವುದನ್ನು ತಡೆಯುವ ಬಾಲಕನ ವಿಡಿಯೊವೊಂದನ್ನು ಪ್ರಧಾನಿ ಟ್ವೀಟಿಸಿದ್ದು, ಮುಂದಿನ ಆರೋಗ್ಯಕರ ನಾಳೆಗಳಿಗೆ ಭಾರತದ ಯುವಜನಾಂಗ ದಾರಿ ತೋರಿಸಲಿದೆ ಎಂಬುದು ನನ್ನ ನಂಬಿಕೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.